ಬೆಂಗಳೂರು : ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, 2022ರಿಂದ 2025ರ ಮೇ 31ರ ವರೆಗೆ ದಾಖಲಾಗಿರುವ ಪ್ರಕರಣಗಳ ಮಾಹಿತಿ ಹಾಗೂ ಎಫ್‌ಐಆರ್ ಪ್ರತಿಗಳನ್ನು ಎಸ್.ಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರಿಗೆ ಕಳುಹಿಸುವಂತೆ ಸೂಚಿಸಿದೆ.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಬರೆದ ಪತ್ರದ ಮೇರೆಗೆ ಎಫ್‌ಐಆರ್ ಪ್ರತಿ, ತೆಗೆದುಕೊಂಡ ಕ್ರಮಗಳು ಹಾಗೂ ಪ್ರಸ್ತುತ ಹಂತದ ಮಾಹಿತಿ ಒದಗಿಸುವಂತೆ ಎಲ್ಲ ಪೊಲೀಸ್ ಕಮಿಷನರ್‌ಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಚಕ್ರವರ್ತಿ ಸೂಲಿಬೆಲೆ ಅವರು, ನನ್ನ ವಿರುದ್ಧ ಮೊಕದ್ದಮೆಗಳೆಷ್ಟಿವೆ ಎಂಬ ಹುಡುಕಾಟ ಆರಂಭಿಸಿದ ಸರ್ಕಾರ ಈಗ, ಪೋಲಿಸ್ ಠಾಣೆಗೆ ಪ್ರತ್ಯೇಕವಾಗಿ ಕಳಿಸಿರುವ ‘ವೈರ್‌ಲೆಸ್ ಮೆಸೇಜ’ನ್ನು ನಮಗೆ ಕಳಿಸಿದವ ರ್ಯಾರು ಎಂಬ ಹುಡುಕಾಟಕ್ಕೆ ಬಂದು ನಿಂತಿದೆ.
ಗದಗ್‌ನಲ್ಲಿ ನಮ್ಮ ಕಾರ್ಯಕರ್ತರನ್ನು ವಿಚಾರಣೆಗೊಯ್ದು ಕಿರಿಕಿರಿ ಮಾಡಲಾಗುತ್ತಿದೆ. ಅವರಿಗೆ ಹತ್ತಿರವಿರುವ ಪೊಲೀಸ್ ಪೇದೆಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನು ಮುಂದೆ ಪೊಲೀಸರೊಳಗೆ ಹಿಂದುತ್ವವಾದಿಗಳ ಪ್ರತ್ಯೇಕಿಸುವ ಪ್ರಯತ್ನ ನಡೆದರೂ ಆಶ್ಚರ್ಯ ಪಡಬೇಡಿ.
ಅವರಿಗಿನ್ನೂ ಗೊತ್ತಿಲ್ಲ ಈ ಆಡಿಯೋ ಕಾಂಗ್ರೆಸ್ ಮುಖಂಡರೊಬ್ಬರಿಂದಲೇ ನಮಗೆ ಸಿಕ್ಕಿರೋದು. ನನಗೆ ಗೊತ್ತು ನೀವು ನಂಬೋದಿಲ್ಲ. ನನಗೆ ನೀವು ನಂಬಬೆಕಾಗಿಯೂ ಇಲ್ಲ.
ಏನೋ ಮಾಡ ಹೊರಟು ಇಲ್ಲಿಗೆ ಬಂದು ನಿಂತಿರುವ ಸರ್ಕಾರದ ದೈನೇಸಿ ಸ್ಥಿತಿಯನ್ನು ಕಂಡು ‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ’ ಅಂದಹಾಗೆ ಕಾಂಗ್ರೆಸ್ಸಿನೊಳಗಿರುವ ಹಿಂದುತ್ವವಾದಿ ನಾಯಕರ ಹುಡುಕಾಟ ಶುರುಮಾಡಿ. ತುಂಬಾ ಕಡಿಮೆಯಿರುವುದರಿಂದ ಬೇಗ ಸಿಕ್ಕಾರು ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ದೊಡ್ಡ ಹುದ್ದೆ.. ಯಾವುದು ಗೊತ್ತಾ?
