ಬಿಟಿವಿಯ ಬಿಗ್ ಇಂಪ್ಯಾಕ್ಟ್ – ಪೊಲೀಸ್ ಠಾಣೆಯಲ್ಲೇ ಗಾಂಜಾ ಡೀಲಿಂಗ್ ಮಾಡ್ತಿದ್ದ ಹೆಡ್ ಕಾನ್ಸ್​​ಟೇಬಲ್​ ನಾಗರಾಜ ಸಸ್ಪೆಂಡ್!

ಹೊಸಕೋಟೆ : ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಖದೀಮರ ಗ್ಯಾಂಗ್ ಕಟ್ಟಿಕೊಂಡು ಗಾಂಜಾ ಡೀಲಿಂಗ್ ನಡೆಸ್ತಿದ್ದ ನಟೋರಿಯಸ್ ಹೆಡ್ ಕಾನ್ಸ್​​ಟೇಬಲ್ ನಾಗರಾಜ್​​ನ್ನು​​ ಸಸ್ಪೆಂಡ್​ ಮಾಡಲಾಗಿದೆ. ಇತ್ತೀಚೆಗೆ ಬಿಟಿವಿ ಈ ನಟೋರಿಯಸ್ ಗ್ಯಾಂಗ್​ನ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿತ್ತು. ಹೆಡ್ ಕಾನ್ಸ್​​ಟೇಬಲ್ ನಾಗರಾಜನ್​ ಗಾಂಜಾ ಡೀಲಿಂಗ್ ಕೇಳಿ ಹೊಸಕೋಟೆ ಜನರೇ ಹೌಹಾರಿದ್ದರು.

ಹೆಡ್ ಕಾನ್ಸ್​​ಟೇಬಲ್ ನಾಗರಾಜ್
ಹೆಡ್ ಕಾನ್ಸ್​​ಟೇಬಲ್ ನಾಗರಾಜ್

ಹೆಡ್ ಕಾನ್ಸ್​​ಟೇಬಲ್ ನಾಗರಾಜ್​ನ ಗಾಂಜಾ ಸೀಕ್ರೆಟ್​ನ್ನು​ ಬಟಾ ಬಯಲು ಮಾಡಿದ್ದ ಬಿಟಿವಿ, ಕಾನೂನು ಕಾಪಾಡೋ ಪೊಲೀಸೇ ಗಾಂಜಾ ಮಾಫಿಯಾ ಮಾಡುತ್ತಿರುವ ಬಗ್ಗೆ ಸಾಕ್ಷಿ ಸಮೇತ ಸುದ್ದಿಯನ್ನು ಬಿತ್ತರಿಸಿತ್ತು.  ಈ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಅಲರ್ಟ್ ಆಗಿದ್ದು, ಹೊಸಕೋಟೆ DySP ಮಲ್ಲೇಶ್​ಗೆ ಪ್ರಕರಣ ಸಂಬಂಧ ವರದಿ ನೀಡುವಂತೆ ಗ್ರಾಮಾಂತರ SP C.K ಬಾಬಾ ಅವರು ತಿಳಿಸಿದ್ದರು. ಇದೀಗ ಹೊಸಕೋಟೆ DySP ಮಲ್ಲೇಶ್​ ಅವರು ತನಿಖೆ ನಡೆಸಿ C.K ಬಾಬಾ ಅವರಿಗೆ ಪ್ರಕರಣದ ಸಂಪೂರ್ಣ ವರದಿಯನ್ನು ಸಲ್ಲಿಸಿದ್ದಾರೆ.

ಗ್ರಾಮಾಂತರ SP C.K ಬಾಬಾ ಕೈಗೆ ವರದಿ ಸೇರ್ತಿದ್ದಂತೆ ಹೆಡ್ ಕಾನ್ಸ್​​​ಟೇಬಲ್ ನಾಗರಾಜ್​ನ್ನು ಸಸ್ಪೆಂಡ್ ಮಾಡಲಾಗಿದೆ. ಹತ್ತಾರು‌ ವರ್ಷದಿಂದ ಹೊಸಕೋಟೆಯಲ್ಲೇ ಜಾಂಡಾ ಹೊಡೆದಿದ್ದ ನಾಗರಜ್​ನ್ನನು ಅಮಾನತು ಮಾಡಿ C.K ಬಾಬಾ ಅವರು ಆದೇಶಿಸಿದ್ದಾರೆ. ಈ ಬಗ್ಗೆ BTVಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಇನ್ನು ಗಾಂಜಾ ಹುಡುಗ್ರನ್ನಿಟ್ಟುಕೊಂಡು ಹೆಡ್ ಕಾನ್ಸ್​​ಟೇಬಲ್ ನಾಗರಾಜ್ ಕೋಟಿ ಕೋಟಿ ಹಣ ಮಾಡಿದ್ದು, ಹೊಸಕೋಟೆಯ SLV ಹೋಟೆಲ್ ಬಳಿ ಹತ್ತಾರು ಎಕರೆ ಅಕ್ರಮ ಜಾಗ ಹೊಂದಿದ್ದಾನೆ ಎನ್ನಲಾಗಿದೆ. ಬೆಂಗಳೂರಿಗೆ ಸೇಲಾದ ಗಾಂಜಾ ಹಣದಲ್ಲೇ ನಾಗರಾಜ್​ ಐಷಾರಾಮಿ ಜೀವನ ನಡೆಸ್ತಿದ್ದ.

ಹೆಡ್ ಕಾನ್ಸ್​​ಟೇಬಲ್ ನಾಗರಾಜ್
ಹೆಡ್ ಕಾನ್ಸ್​​ಟೇಬಲ್ ನಾಗರಾಜ್

ಬೆಂಗಳೂರನ್ನ ನಶೆಯಲ್ಲಿ ತೇಲೋ ಹಾಗೆ ಮಾಡುತ್ತಿದ್ದ ನಾಗರಾಜನಿಗೆ ಇನ್ನು ಯಾಕೆ  ಶಿಕ್ಷೆ ಆಗಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದರುಯ. ಹೋಂ ಮಿನಿಸ್ಟರ್ ಸಾಹೇಬ್ರೆ ಈ ಬಗ್ಗೆ ತನಿಖೆ ನಡೆಸಿ, ಹೆಡ್ ಕಾನ್ಸ್​​ಟೇಬಲ್​​ನ ನಾಗರಾಜ್​ನ್ನು ಕೂಡಲೇ ವಜಾ ಮಾಡಿಬೇಕೆಂದು ಬಿಟಿವಿ ನಿರಂತರವಾಗಿ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಹೆಡ್ ಕಾನ್ಸ್​​​ಟೇಬಲ್ ನಾಗರಾಜ್​ ಸಸ್ಪೆಂಡ್ ಆಗಿರುವುದು ಬಿಟಿವಿಯ ನಿರಂತರ ಶ್ರಮಕ್ಕೆ ಸಂದ ದೊಡ್ಡ ಜಯವಾಗಿದೆ.

ಇದನ್ನೂ ಓದಿ : ಟೀಸರ್​ನಲ್ಲೇ ಮೋಡಿ ಮಾಡಿದ ‘ಎಲ್ಟು ಮುತ್ತಾ’ ಸಿನಿಮಾ!

Btv Kannada
Author: Btv Kannada

Read More