ಬೆಂಗಳೂರು : ಕರ್ನಾಟಕದ ತೋತಾಪುರಿ ಮಾವಿಗೆ ಆಂಧ್ರದ ಚಿತ್ತೂರು ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಇದರಿಂದ ತೋತಾಪುರಿ ಮಾವಿನ ಬೆಲೆ ಕುಸಿದು ಬಿದ್ದಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ನಿರ್ಬಂಧ ಹಿನ್ನೆಲೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ತೋತಾಪುರಿ ಮಾವಿಗೆ ವಿಧಿಸಿರುವ ನಿರ್ಬಂಧ ಹಿಂಪಡೆಯಲು ಆಂಧ್ರಪ್ರದೇಶ ಸಿಎಂಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಚಿತ್ತೂರು ಜಿಲ್ಲಾಧಿಕಾರಿ ಕರ್ನಾಟಕದ ತೋತಾಪುರಿ ಮಾವು ನಿರ್ಬಂಧ ಹೇರಿದ್ದಾರೆ. ಇದರಿಂದ ಕರ್ನಾಟಕ ಗಡಿಭಾಗದ ಮಾವು ಬೆಳೆದ ರೈತರಿಗೆ ತೊಂದರೆ ಉಂಟು ಮಾಡಿದೆ. ಹೀಗಾಗಿ ಈ ನಿರ್ಬಂಧವನ್ನ ತೆರವುಗೊಳಿಸಿ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಕೋರಿದ್ದಾರೆ.
ಪೂರ್ವ ಸಮಾಲೋಚನೆ ಇಲ್ಲದೆ ನಿರ್ಬಂಧ ಸರಿ ಇಲ್ಲ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿದೆ. ಇದು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ. ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತರ-ರಾಜ್ಯ ಸಾಗಣೆಯನ್ನು ಅಡ್ಡಿಪಡಿಸಬಹುದು. ಹಾಗಾಗಿ ನೀವು ಮಧ್ಯ ಪ್ರವೇಶಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.
ಇದಕ್ಕೂ ಮುಂಚೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆಂಧ್ರಪ್ರದೇಶ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಸಹ ಪತ್ರದ ಮೂಲಕ ನೇರವಾಗಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಟೀಸರ್ನಲ್ಲೇ ಮೋಡಿ ಮಾಡಿದ ‘ಎಲ್ಟು ಮುತ್ತಾ’ ಸಿನಿಮಾ!
