ಹೊಸದಿಲ್ಲಿ : ಕರ್ನಾಟಕದ ಬಳ್ಳಾರಿ-ಚಿಕ್ಕಜಾಜೂರು ಹಾಗೂ ಜಾರ್ಖಂಡ್ ಕೋಡೆರಾಮ್-ಬರಕಕಾನ ನಡುವೆ ಹೊಸ ಡಬಲ್ ರೈಲು ಮಾರ್ಗ ನಿರ್ಮಿಸಲು 6,405 ಕೋಟಿ ವೆಚ್ಚದ ಕಾಮಗಾರಿಯ ಎರಡು ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.
ಈ ಕುರಿತು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದ್ದು, ಬುಧವಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಕಿದೆ. ಬಳ್ಳಾರಿ-ಚಿಕ್ಕಜಾಜೂರ ಡಬಲ್ ರೈಲು ಮಾರ್ಗ 185ಕಿ.ಮೀ. ಯೋಜನೆಯಾಗಿದ್ದು, ಬಳ್ಳಾರಿಯಿಂದ ಚಿತ್ರದುರ್ಗ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಯ ಮೂಲಕ ಹಾದುಹೋಗಲಿದೆ. ಕೊಡೆರಾಮ್ -ಬರಕಕಾನ ನಡುವೆ 133 ಕಿ.ಮೀ. ಚಾರ್ಖಂಡ್‌ನ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ಪ್ರದೇಶದ ಮೂಲಕ ಹಾದುಗೋಗಲಿದೆ.
ಈ ಮಾರ್ಗ ಪಾಟ್ನಾ ಹಾಗೂ ರಾಂಚಿ ನಡುವೆ ಕಡಿಮೆ ಅಂತರದಲ್ಲಿ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಆಂಧ್ರಪ್ರದೇಶದ ಏಳು ಜಿಗಳನ್ನು ಈ ಯೋಜನೆ ಒಳಗೊಂಡಿದೆ. ಈ ಯೋಜನೆ ಪ್ರಯಾಣಿಕರಿಗೆ ಅನುಕೂಲವಾಗಿದೆ. ದುಂದು ವೆಚ್ಚ ಕಡಿಮೆ ಮಾಡಲಿದೆ. ಇದರಿಂದ ಇಂಧನವು ಉಳಿಯಲಿದೆ.
ಈ ಯೋಜನೆಗಳು ಪ್ರಧಾನಿ ಮೋದಿ ಅವರ ಹೊಸ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಆತ್ಮ ನಿರ್ಭರ ಯೋಜನೆಯಾಗಿದ್ದು, ಉದ್ಯೋಗ ಸೃಷ್ಟಿಯಾಗಲಿವೆ. ಈ ಯೋಜನೆ 28.19 ಲಕ್ಷ ಜನ ಸಂಖ್ಯೆಯನ್ನು ಹೊಂದಿರುವ ಸುಮಾರು 1408 ಹಳ್ಳಿಗಳಿಗೆ ರೈಲು ಸೌಲಭ್ಯ ದೊರೆಯಲಿದೆ. ಕಲ್ಲಿದ್ದಲು, ಕಬ್ಬಿಣದ ಅದಿರು, ಸಿದ್ಧಪಡಿಸಿದ ಉಕ್ಕು, ಸಿಮೆಂಟ್, ರಸಗೊಬ್ಬರಗಳು, ಕೃಷಿ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಮುಂತಾದ ಸರಕುಗಳ ಸಾಗಣೆಗೆ ಇವು ಅತ್ಯಗತ್ಯ ಮಾರ್ಗಗಳಾಗಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಇದನ್ನೂ ಓದಿ : ಕೊಡಗು, ಉಡುಪಿಯಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ – ಅಂಗನವಾಡಿ ಸೇರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ!
