ತುಮಕೂರು : ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ತಿಪಟೂರು, ತುರುವೇಗೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ 10 ಇನ್ಸ್ಪೆಕ್ಟರ್ಗಳ ತಂಡದಿಂದ ಹತ್ತು ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ನಲ್ಲಿ ಕಡತಗಳ ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ತಾಲೂಕು ಕಚೇರಿ ಮೇಲೆ ಅಧಿಕಾರಿಗಳು ರೈಡ್ ಮಾಡಿ ಕಚೇರಿಗಳನ್ನ ಎಲ್ಲಾ ಕಡೆಯಿಂದ ಬಂದ್ ಮಾಡಿದ್ದಾರೆ. ಲೋಕಾಯುಕ್ತ ಇಲಾಖೆ ಆದೇಶದಂತೆ ತುಮಕೂರು ಜಿಲ್ಲೆಯ ಹತ್ತು ತಾಲೂಕು ಕಚೇರಿ ಮೇಲೆ ಏಕಾಏಕಿ 50ಕ್ಕೂ ಹೆಚ್ಚು ಸಿಬ್ಬಂದಿಯಿಂದ ದಾಳಿ ನಡೆಸಿದ್ದಾರೆ.
ಕೊರಟಗೆರೆ ಪಟ್ಟಣದ ಮಿನಿವಿಧಾನಸೌಧ ಕಚೇರಿಗೆ ದಿಢೀರ್ ಭೇಟಿ ನೀಡಿದ ಚಿಕ್ಕಬಳ್ಳಾಪುರ ಲೋಕಾಯುಕ್ತ ಇನ್ಸ್ಪೆಕ್ಟರ್ ನಿರ್ಮಲಾ ನೇತೃತ್ವದ ತಂಡದಿಂದ ದಾಖಲೆ ಪರಿಶೀಲನೆ ಮಾಡಲಾಗಿದೆ. ಸಾಗುವಳಿ ಚೀಟಿ, ಪಹಣಿ ತಿದ್ದುಪಡಿ ಮತ್ತು ವಿಲೇವಾರಿ ಆಗದೇ ಇರುವ ಕಡತಗಳನ್ನು ಲೋಕಾಯುಕ್ತ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ. ಕೊರಟಗೆರೆ ಪಟ್ಟಣದ ತಹಶೀಲ್ದಾರ್ ಕಚೇರಿ, ದಾಖಲೆ ಕಚೇರಿ, ಭೂಮಾಪನಾ ಇಲಾಖೆ ಮತ್ತು ಉಪಖಜಾನೆ ಇಲಾಖೆಗಳ ಖಡತಗಳ ಪರಿಶೀಲನೆ ನಡೆಸಿ, ವಿಲೇವಾರಿ ಆಗದೇ ಇರುವ ಜನಸಾಮಾನ್ಯರ ಸಮಸ್ಯೆಗಳ ಖಡತಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಸಭೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನಟಿ ರನ್ಯಾಗೆ ಮುಗಿಯದ ಸಂಕಷ್ಟ – ಇಂದಿನಿಂದ 3 ದಿನ IT ಅಧಿಕಾರಿಗಳಿಂದ ವಿಚಾರಣೆ!
