ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ಷರತ್ತುಬದ್ಧ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್!

ಹೈದರಾಬಾದ್ :‌ ಮಾಜಿ ಸಚಿವ, ಗಾಲಿ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಸಿಬಿಐ ಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಹಲವು ಷರತ್ತುಗಳನ್ನ ವಿಧಿಸಿ ಜಾಮೀನು ನೀಡಿದೆ.

ಹಾಗೆಯೇ 10 ಲಕ್ಷ ರೂಪಾಯಿ ಮೌಲ್ಯದ 2 ಶ್ಯೂರಿಟಿ ನೀಡಲು ಸೂಚಿಸಿದೆ. ಜೊತೆಗೆ ಭಾರತ ಬಿಟ್ಟು ಹೋಗಲು ಜನಾರ್ದನ ರೆಡ್ಡಿಗೆ ಅನುಮತಿ ಇಲ್ಲ. ಪಾಸ್​ಪೋರ್ಟ್ ವಶಕ್ಕೆ ಪಡೆಯಲು ಕೋರ್ಟ್​ ಸೂಚಿಸಿದೆ.

ಏನಿದು ಪ್ರಕರಣ? ಆಂಧ್ರದಲ್ಲಿ ವೈ.ಎಸ್‌ ರಾಜಶೇಖರ ರೆಡ್ಡಿ ಹಾಗೂ ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಓಬಳಾಪುರಂ ಅಕ್ರಮ ಗಣಿಕಾರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆಂಧ್ರ-ಕರ್ನಾಟಕದ ಗಡಿಗೆ ಹೊಂದಿಕೊಂಡ ಓಬಳಾಪುರಂ ಬೆಟ್ಟದಲ್ಲಿ ಅದಿರಿನ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಗಣಿ‌ಗಾರಿಕೆ ಮಂಜೂರಾತಿ ವೇಳೆ ಇಲಾಖೆಗಳಿಂದ ಅಕ್ರಮವಾಗಿದೆ. ಅರಣ್ಯ ಇಲಾಖೆ, ಗಣಿ‌ ಇಲಾಖೆಯಿಂದ ಅಕ್ರಮ‌ ಆಗಿದೆ ಎಂದು ಆರೋಪಿಸಲಾಗಿತ್ತು.

ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 884 ಕೋಟಿ ಅಕ್ರಮ ಎಸಗಿರೋದು ಸಾಬೀತಾಗಿದೆ. ಒಟ್ಟು 29 ಲಕ್ಷ ಟನ್ ಅದಿರು ಲೂಟಿ ಆಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐನ ವಿಶೇಷ ಕೋರ್ಟ್, ಶ್ರೀನಿವಾಸರೆಡ್ಡಿ, ಜನಾರ್ದನರೆಡ್ಡಿ, ಅಲಿಖಾನ್, ಸಬಿತಾ ಇಂದ್ರಾರೆಡ್ಡಿ, ಕೃಪಾನಂದ ದೋಷಿಗಳು ಎಂದು ಹೇಳಿತ್ತು. ಶಿಕ್ಷೆಯ ಪ್ರಮಾಣವಾಗಿ 5 ಅಪರಾಧಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ಪ್ರಕಟ ಮಾಡಿತ್ತು.

ಇದನ್ನೂ ಓದಿ : ಮಾಜಿ ಸಚಿವ ಬಿ.ನಾಗೇಂದ್ರಗೂ ED ಶಾಕ್ – ಬೆಂಗಳೂರಿನ ಶಾಸಕರ ಭವನದಲ್ಲಿ ಅಧಿಕಾರಿಗಳಿಂದ ಶೋಧ!

Btv Kannada
Author: Btv Kannada

Read More