ರಾತ್ರಿ ಸುರಿದ ಧಾರಾಕಾರ ಮಳೆಗೆ ತತ್ತರಿಸಿದ ಸಿಲಿಕಾನ್​​ ಸಿಟಿ – ಕೆರೆಯಂತಾದ ರಸ್ತೆಗಳು.. ವಾಹನ ಸಂಚಾರ ಅಸ್ತವ್ಯಸ್ತ!

ಬೆಂಗಳೂರು : ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ, ಹೊಸೂರು, ಆಡುಗೋಡಿ ಮತ್ತು ಬೊಮ್ಮನಹಳ್ಳಿಗಳಲ್ಲಿ ಜೋರಾಗಿ ಮಳೆ ಸುರಿದಿದೆ. ಮಳೆ ನೀರು ರಸ್ತೆಗಳಲ್ಲಿ ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸದ್ಯ ರಸ್ತೆಯಲ್ಲಿ ನೀರು ತುಂಬಿ ಅಲ್ಲಲ್ಲಿ ಟ್ರಾಫಿಕ್ ಜಾಮ್‌ ಉಂಟಾಗಿದೆ. ಬೆಳ್ಳಂಬೆಳಗ್ಗೆ ಟ್ರಾಫಿಕ್​ನಿಂದ ವಾಹನ‌ ಸವಾರರು ಹೈರಾಣಗಿದ್ದಾರೆ. ಎಲೆಕ್ಟ್ರಾನಿಕ್​ ಸಿಟಿಯಲ್ಲಿ 2 ಕಿ.ಮೀಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿದೆ. 

ಆಟೋ ಮಾರ್ಟ್ ಬಳಿ ಮಳೆ ನೀರು ನಿಂತಿದ್ದರಿಂದ 14ನೇ ಮುಖ್ಯ ರಸ್ತೆ ಎಚ್‌ಎಸ್‌ಆರ್​ ಲೇಔಟ್​ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರ​ ಪೊಲೀಸರು ತಿಳಿಸಿದ್ದಾರೆ.

ಭದ್ರಪ್ಪ ಲೇಔಟ್ ರೈಲ್ವೆ ಕೆಳ ಸೇತುವೆಯ ಬಳಿ ಕೂಡ ಮಳೆ ನೀರು ನಿಂತಿದ್ದರಿಂದ ಡಾಲರ್ಸ್ ಕಾಲೋನಿ ಕಡೆಗೆ ನಿನ್ನೆ ಸಂಚಾರ ನಿಧಾನಗತಿಯಲ್ಲಿತ್ತು. ಸಿಂಗಸಂದ್ರ ಮೆಟ್ರೋ ನಿಲ್ದಾಣದಿಂದ ನಗರದ ಕಡೆಗೆ ಸಂಚಾರ ನಿಧಾನಗತಿಯಿತ್ತು. ಸದ್ಯ ಇಲ್ಲಿನ ರಸ್ತೆಗಳು ಸಹಜ ಸ್ಥಿತಿಗೆ ಬಂದಿದೆ.

ಹೊಸೂರು ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡಿತ್ತು. ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ ಮತ್ತು ರೂಪೇನ ಅಗ್ರಹಾರದಿಂದ ಬೊಮ್ಮನಹಳ್ಳಿ ಎರಡೂ ಕಡೆಗೆ ಸಂಚಾರ ನಿಧಾನಗತಿಯಲ್ಲಿತ್ತು. ಅದೇ ರೀತಿಯಾಗಿ ಖೋಡೆ ಕೆಳಸೇತುವೆ ಬಳಿ ಮತ್ತು ಕಸ್ತೂರಿ ನಗರದ ಬಳಿ ಕೂಡ ಮಳೆ ನೀರು ನಿಂತುಕೊಂಡಿತ್ತು. ಹೀಗಾಗಿ ವಾಹನ ಸವಾರರು ಪರದಾಡಿದ್ದಾರೆ.

 

ಇದನ್ನೂ ಓದಿ : ಇನ್ಮುಂದೆ ಕಬ್ಬನ್‌ ಪಾರ್ಕ್‌ನಲ್ಲಿ ರೀಲ್ಸ್, ವೆಡ್ಡಿಂಗ್​ ಶೂಟ್​​ಗೆ ನಿರ್ಬಂಧ – ರೂಲ್ಸ್‌ ಬ್ರೇಕ್‌ ಮಾಡಿದ್ರೆ ದಂಡದ ಜೊತೆ ಕಾನೂನು ಕ್ರಮ!

Btv Kannada
Author: Btv Kannada

Read More