ಮುಡಾ ಸೈಟ್​ ಅಕ್ರಮ ಕೇಸ್​ – ಬರೋಬ್ಬರಿ 100 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ED!

ಬೆಂಗಳೂರು : ಮುಡಾ ಸೈಟ್​ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬರೋಬ್ಬರಿ 100 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಈ ಬಗ್ಗೆ ಬೆಂಗಳೂರು ಇಡಿ ಅಧಿಕಾರಿಗಳು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 92 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. PMLA (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002) ಕಾಯಿದೆಯಡಿ ಸಿಎಂ ಸಿದ್ದರಾಮಯ್ಯ ಪತ್ನಿ ಸೇರಿದಂತೆ ಹಾಗೂ ಇತರರಿಗೆ ಸೇರಿದ 92 ಸೈಟ್‌ಗಳನ್ನು ಜಪ್ತಿ ಮಾಡಲಾಗಿದೆ.

ಈ ಮೊದಲು ಮುಡಾ ಹಗರಣದಲ್ಲಿ ಇ.ಡಿ 162 ಸೈಟ್‌ಗಲನ್ನು ಜಪ್ತಿ ಮಾಡಿತ್ತು. 162 ಸೈಟ್‌ಗಳ ಮಾರುಕಟ್ಟೆ ಮೌಲ್ಯ 300 ಕೋಟಿ ರೂಪಾಯಿ. ಈಗ 92 ಸೈಟ್‌ಗಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂಪಾಯಿ. ಇದುವರೆಗೂ ಒಟ್ಟು 400 ಕೋಟಿ ರೂಪಾಯಿ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಿದ್ದೇವೆ ಎಂದ ಇಡಿ ಮಾಹಿತಿ ನೀಡಿದೆ.

ಇದನ್ನೂ ಓದಿ : ‘ಅಖಂಡ-2’ ಟೀಸರ್‌ ರಿಲೀಸ್‌.. ಮಾಸ್‌ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ!

Btv Kannada
Author: Btv Kannada

Read More