ಮಂಡ್ಯ : ಗೆಜ್ಜಲಗೆರೆ ‘ಮನ್ಮುಲ್‘ನ ನೂತನ ಅಧ್ಯಕ್ಷರಾಗಿ ಯು.ಸಿ.ಶಿವಕುಮಾರ್ ಅವರು ನಿನ್ನೆ ಅಧಿಕಾರ ಸ್ವೀಕಾರಿಸಿದ್ದಾರೆ. ಮಧ್ಯಾಹ್ನ ಹಾಲು ಉತ್ಪನ್ನ ಘಟಕದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರು ‘ಮನ್ಮುಲ್’ನ ನೂತನ ಅಧ್ಯಕ್ಷ ಅವರು ಶಿವಕುಮಾರ್ ದಾಖಲೆ ನೀಡಿ ಶುಭ ಹಾರೈಸಿದ್ದಾರೆ.
ಆ ಬಳಿಕ ಮಾತನಾಡಿದ ಅಧ್ಯಕ್ಷ ಯು.ಸಿ.ಶಿವಕುಮಾರ್ ಅವರು, ಹೊಸ ಹೊಸ ಯೋಜನೆಗಳ ಮೂಲಕ ಮನ್ಮುಲ್ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು. ಹಾಗೆಯೇ ಒಕ್ಕೂಟದ ರೈತರ ಕ್ಷೇಮಾಭಿವೃದ್ಧಿ ನಿಧಿಯಿಂದ ಉತ್ಪಾದಕರ ಮಕ್ಕಳಿಗೆ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆ ತೆರೆಯುವ ಅಲೋಚನೆ ಇದೆ ಎಂದರು.

ಇದೇ ವೇಳೆ ಮನ್ಮುಲ್ನ ನೂತನ ಅಧ್ಯಕ್ಷ ಯು.ಸಿ.ಶಿವಕುಮಾರ್ರನ್ನು ಒಕ್ಕೂಟದ ನಿರ್ದೇಶಕರು, ಅಧಿಕಾರಿಗಳು, ಬಂಧು ಮಿತ್ರರು ಅಭಿನಂದಿಸಿದರು. ಸಮಾರಂಭದಲ್ಲಿ ಒಕ್ಕೂಟದ ನಿರ್ದೇಶಕರಾದ ಬೋರೇಗೌಡ, ಹರೀಶ್, ಸಾದೊಳಲು ಸ್ವಾಮಿ, ಒಕ್ಕೂಟದ ಎಂ.ಡಿ.ಡಾ ಮಂಜೇಶ್ ಸೇರಿದಂತೆ ಹಲವರು ಹಾಜರಿದ್ದರು.
ಇದನ್ನೂ ಓದಿ : ಮುಜರಾಯಿ ದೇವಾಲಯಗಳಲ್ಲಿ ಇನ್ಮುಂದೆ ನೀರಿನ ಬಾಟಲ್, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ!
