ಬೆಳಗಾವಿ : ಮೇವು ತರಲು ಹೋಗಿದ್ದ ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು!

ಬೆಳಗಾವಿ : ಮೇವು ತರಲು ಹೊಲಕ್ಕೆ ಹೋಗಿದ್ದ ಯುವಕ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಜಿಲ್ಲೆಯ ಮದಮಕ್ಕನಾಳ ಗ್ರಾಮದಲ್ಲಿ ನಡೆದಿದೆ. 24 ವರ್ಷದ ಸಚಿನ್ ವಿಜಯ ಹರಿಜನ ಮೃತ ದುರ್ದೈವಿ.

ದುಷ್ಕರ್ಮಿಗಳು ಯುವಕನನ್ನು ಹಾಡುಹಗಲೇ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ಧಾರೆ. ಹೊಲಕ್ಕೆ ಮೇವು ತರಲೆಂದು ಹೋಗಿದ್ದ ವಿಜಯ ಹರಿಜನ ಬೆಳ್ಳಿಗೆ 8.30ರ ಸುಮಾರಿಗೆ ಹತ್ಯೆಯಾಗಿದ್ದಾನೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ಕೊಟ್ಟ ಹುಕ್ಕೇರಿ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸಿನಿಮಾ ರೂಪದಲ್ಲಿ ಬರಲಿದೆ ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಜೀವನ ಚರಿತ್ರೆ!

Btv Kannada
Author: Btv Kannada

Read More