ಮೈಸೂರು : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹನ್ನೊಂದು ವರ್ಷದ ಸಾಧನೆಗೆ ಝೀರೊ ಅಂಕ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೋದಿ ಅಧಿಕಾರಕ್ಕೆ ಬಂದು 11 ವರ್ಷ ಪೂರ್ಣಗೊಂಡಿರುವ ಬಗ್ಗೆ ಮಾತನಾಡಿದ ಅವರು, ಮೋದಿ ಸರ್ಕಾರ ಹನ್ನೊಂದು ವರ್ಷ ಪೂರೈಸಿದ್ದು ಕೇವಲ ಪ್ರಚಾರದಿಂದ ಅಷ್ಟೇ. ಅವರ ಸರ್ಕಾರಕ್ಕೆ ಝೀರೊ ಅಂಕ ನೀಡುತ್ತೇನೆ ಎಂದರು.
ನೋಟು ಅಮಾನಿಕರಣ ಯಾರಿಗೆ ಅನುಕೂಲ ಆಯ್ತು? ಅಚ್ಚೇ ದಿನ ಅಂದ್ರು ಯಾರಿಗೆ ಅನುಕೂಲ ಆಯ್ತು? ಪ್ರತಿ ವರ್ಷ ಎರೆಡು ಕೋಟಿ ಉದ್ಯೋಗ ಅಂದ್ರು ಯಾರಿಗೆ ಉದ್ಯೋಗ ಕೊಟ್ರು? ಏನೆಲ್ಲಾ ಭರವಸೆ ಕೊಟ್ರು ಒಂದನ್ನೂ ಮಾಡಿಲ್ಲ ಎಂದು ಸಿಎಂ ಸಿದ್ದು ಕೇಂದ್ರದ ವಿರುದ್ದ ಗುಡುಗಿದರು.
ಮೋದಿ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತೆ ಅಂದ್ರು.. ಈಗ ಅವರೇ ನಮ್ಮ ಯೋಜನೆಯನ್ನ ಕಾಫಿ ಮಾಡ್ತಿದ್ದಾರೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಕ್ರಾಂತಿಕಾರಕ ಟ್ಯಾಕ್ಸ್ ಸಂಗ್ರಹ ಮಾಡುತ್ತೇ ಅಂದ್ರು, ಏನ್ ಮಾಡಿದ್ರು? ಈಗ ಇವರೇ ಪಿಎಂ ಆಗಿದ್ದಾರೆ ಏನು ಮಾಡಿದ್ರು. 14ನೇ ಹಣಕಾಸು ಆಯೋಗದಿಂದ ದುಡ್ಡು ಕೊಡ್ತೀನಿ ಅಂದ್ರು ಕೊಟ್ರಾ? ರಾಜ್ಯ ಬಿಜೆಪಿ ಇದನ್ನೇ ಕೇಳುವುದಿಲ್ಲ, ನಮ್ಮ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದು ಕಿಡಿಕಾರಿದರು.
ಇದನ್ನೂ ಓದಿ : KSCAಗೆ ಸಂಕಷ್ಟದ ಮೇಲೆ ಸಂಕಷ್ಟ – BBMPಯಿಂದಲೂ ನೋಟಿಸ್ ಜಾರಿ!
