ಸಿದ್ದು ಸರ್ಕಾರಕ್ಕೆ RCB ಕಪ್​ ಸಂಕಷ್ಟ – ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಜೆಪಿ ನಿಯೋಗ!

ಬೆಂಗಳೂರು : ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಸರ್ಕಾರಕ್ಕೆ ಸಂಕಷ್ಟ ತಂದಿಟ್ಟಿದ್ದು, RCB ಕಪ್ ಗೆದ್ದ​ ಸಂಭ್ರಮಾಚರಣೆ ಸಿದ್ದು ಸರ್ಕಾರವನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ.

ಇಂದು ಈ ಪ್ರಕರಣ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್​ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಲಿದೆ. ಕಾಲ್ತುಳಿತ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವಿದೆ. ಸಿಎಂ, ಡಿಸಿಎಂ, ಸಿಎಂ ಆಪ್ತ ಹಸ್ತಕ್ಷೇಪವೇ 11 ಜನರ ಸಾವಿಗೆ ಕಾರಣ. ಆರ್​ಸಿಬಿ ಕಾಲ್ತುಳಿತ ದುರಂತವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜಿಪಿ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಲಿದ್ದಾರೆ.

ಇನ್ನು, ಶೀಘ್ರವೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ರಾಜ್ಯದ ಪೊಲೀಸರು ಸಿಎಂ, ಡಿಸಿಎಂ ವಿರುದ್ಧ ತನಿಖೆ ಮಾಡಲು ಸಾಧ್ಯವಿಲ್ಲ. ಸಿಎಂ, ಡಿಸಿಎಂ ವಿಚಾರಣೆ ನಡೆದು ಆರೋಪಿಯನ್ನಾಗಿಸಬೇಕು ಎಂದು ಬಿಜೆಪಿ ಇಂದು ದೂರು ನೀಡಲಿದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಕಾರು-ಬೈಕ್​ ಮಧ್ಯೆ ಭೀಕರ ಅಪಘಾತ.. ಇಬ್ಬರು ಸ್ಥಳದಲ್ಲೇ ದುರ್ಮರಣ!

Btv Kannada
Author: Btv Kannada

Read More