ಬಾಗಲಕೋಟೆ : ಜಮಖಂಡಿ ಶಾಸಕ ಜಗದೀಶ ಗುಡಗುಂಟಿ PA ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಕನೂರು ಗ್ರಾಮದಲ್ಲಿ ಜರುಗಿದೆ. ಜಮೀನಲ್ಲಿ ದಾರಿ ಬಿಡುವ ವಿಚಾರವಾಗಿ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಚಿನ್ ಚನಾಳ, ಕೃಷ್ಣ ಚನಾಳ ಜೊತೆಗೂಡಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಮಾರಣಾಂತಿಕ ಹಲ್ಲೆಗೊಳಗಾದ ಯುವಕನನ್ನ ಗಣೇಶ ಮಳಲಿ ಎಂದು ಗುರುತಿಸಲಾಗಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜಮಖಂಡಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣೇಶ್ ಮಳಲಿ ತಂದೆ ನ್ಯಾಯ ಕೊಡಿಸುವಂತೆ ಪರದಾಡುತ್ತಿದ್ದು, ಜಮಖಂಡಿ ಪೊಲೀಸರು ತನಿಖೆ ನಡೆಸಲು ಹಿಂದೇಟು ಹಾಕಿದ್ದಾರೆ. ಪೊಲೀಸರ ನಡೆ ಖಂಡಿಸಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದ ‘ಪುಟ್ಟಕ್ಕನ ಮಕ್ಕಳು’ – ಜೀ ಕನ್ನಡದ ಈ ಸೀರಿಯಲ್ ಬರೆದ ದಾಖಲೆ ಗೊತ್ತಾ?

Author: Btv Kannada
Post Views: 946