ಕಾಲ್ತುಳಿತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಜೂ.​​4ರಂದೇ DPRA ಕಾರ್ಯದರ್ಶಿಗೆ ಅಪಾಯದ ಎಚ್ಚರಿಕೆ ನೀಡಿದ್ದ ಡಿಸಿಪಿ!

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್.4ರಂದೇ DPRA ಕಾರ್ಯದರ್ಶಿಗೆ ಪೊಲೀಸರು ಪತ್ರ ಬರೆದು ಅಪಾಯದ ಎಚ್ಚರಿಕೆ ನೀಡಿರುವುದು ಈಗ ತಿಳಿದುಬಂದಿದೆ.

ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಜೂನ್ ರಂದು ಪತ್ರ ಬರೆದಿದ್ದು, ಪೊಲೀಸರು ಬೇಡವೆಂದರೂ ಸರ್ಕಾರ ಕಾರ್ಯಕ್ರಮ ಮಾಡಿ 11 ಜನರ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೇಶ್ಯಾದ್ಯಂತ ಇದ್ದು. ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಆತುರದಿಂದ ಕಾರ್ಯಕ್ರಮ ಆಯೋಜಿಸುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಧಾನಸೌಧಕ್ಕೆ ಆಗಮಿಸುತ್ತಾರೆ. ಹಾಗಾಗಿ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ/ಸಿಬ್ಬಂದಿಗಳ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಡಿಸಿಪಿ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?

  • ದಿನಾಂಕ 04.06.2025 ರಂದು ಕಾರ್ಯಕ್ರಮವನ್ನು ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜನೆ ಮಾಡುತ್ತಿರುವುದರಿಂದ, ಸದರಿ ದಿನದಂದು ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶಿಸಲು ವಿತರಣೆ ಮಾಡುವ ಆನ್ ಲೈನ್ ಮತ್ತು ಆಫ್ ಲೈನ್ ಪಾಸುಗಳನ್ನು ಸಂಪೂರ್ಣವಾಗಿ ನಿರ್ಭಂದಿಸಲು ಕೋರಿದೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಮಾರಂಭ ಭವ್ಯ ಮೆಟ್ಟಿಲುಗಳ ಮುಂಭಾಗ ದಿನಾಂಕ 04.06.2025 ರಂದು ಸಂಜೆ 04:00 ಗಂಟೆ ಆಯೋಜನೆಗೊಳ್ಳುತ್ತಿದ್ದು, ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ತಮ್ಮ ತಮ್ಮ ಕುಟುಂಬ ವರ್ಗದವರನ್ನು ಕರೆತರುವ ಸಾಧ್ಯತೆಗಳು ಹೆಚ್ಚಾಗಿದ್ದು, ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಕುಟುಂಬ ವರ್ಗದವರನ್ನು ಕರೆತರದಂತೆ ಆದೇಶ ನೀಡಲು ಮತ್ತು ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ದಿನಾಂಕ 04.06.2025 ರಂದು ಅಪರಾಹ್ನ ರಜೆ ಘೋಷಿಸಲು ಕೋರಲಾಗಿದೆ ಹಾಗೂ ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ಕಾರ್ಯಕ್ರಮದ ಸ್ಥಳಕ್ಕೆ ಬರದಂತೆ ಸೂಚನೆ ಕಳುಹಿಸಬೇಕೆಂದು ಕೋರಿದೆ.
  • ವಿಧಾನಸೌಧ ಕಟ್ಟಡವು Vital Instalation ಕಟ್ಟಡವಾಗಿದ್ದು, ಕಟ್ಟಡದ ಸುರಕ್ಷತೆಯ ಸಂಬಂಧ ವಿಧಾನಸೌಧ ಆವರಣದ ಮತ್ತು ಮುಂಭಾಗಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಕೋರಿದ್ದು, ಅಳವಡಿಸಿರುವುದಿಲ್ಲ. ಸದರಿ ಸನ್ಮಾನ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಆಗಮಿಸುತ್ತಿರುವುದರಿಂದ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿಯ ಅವಶ್ಯಕತೆ ಇರುತ್ತದೆ ಇರುವುದು ಭದ್ರತಾ ವ್ಯವಸ್ಥೆಗೆ ವ್ಯತಯ ಉಂಟಾಗುವ ಸಾಧ್ಯತೆ ಇರುತ್ತದೆ.
  • ಸದರಿ ಸಮಾರಂಭದಲ್ಲಿ ಕ್ರಿಕೆಟ್ ಪಟುಗಳನ್ನು ಸನ್ಮಾನಿಸುವ ಸಂಬಂಧ ವೇದಿಕೆಯು ಸದೃಢವಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆ, ವಿಧಾನಸೌಧ ವಿಭಾಗ  Certificate ಪಡೆದುಕೊಳ್ಳುವ ಸಂಬಂಧ, ಕನಿಷ್ಠ 02 ಗಂಟೆ ಮುಂಚಿತವಾಗಿ ವೇದಿಯನ್ನು ಪರಿವೀಕ್ಷಣೆಗ ಬಿಟ್ಟುಕೊಡಲು ಆಯೋಜಕರಿಗೆ ತಿಳಿಸುವುದು.
  • ಸದರಿ ಸಮಾರಂಭದಲ್ಲಿ ವಿದ್ಯುತ್ ಉಪಕರಣಗಳನ್ನು ಉಪಯೋಗಿಸುತ್ತಿದ್ದು, ಸಂಬಂಧಪಟ್ಟ ವಿದ್ಯುತ್ ವಿಭಾಗದ, ಅಭಿಯಂತರರಿಂದ, Fitness Certificate ಪಡೆದುಕೊಳ್ಳಲು AEE, PWD (Electricial) ರವರಿಗೆ ಪತ್ರ ವ್ಯವಹರಿಸಲು ಕೋರಿದೆ.
  • ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸಂಸ್ಥೆಯವರು ಕಾರ್ಯಕ್ರಮ ಜರುಗುವ 02 ಗಂಟೆ ಮೊದಲು ವೇದಿಕೆಯನ್ನು Anti Sabotage Check ಸಂಬಂಧ ಬಿಟ್ಟು ಕೊಡುವಂತೆ ಆಯೋಜಕರಿಗೆ ಸೂಚಿಸಬೇಕೆಂದು ಕೋರುತ್ತೇನೆ.
  • ಈ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೊಡ್ಡದಾಗಿರುವುದರಿಂದ ಹೊರಗಡೆಯಿಂದ ಅಧಿಕಾರಿ/ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ತೆಗೆದುಕೊಳ್ಳಬೇಕಾಗಿದ್ದು, ಇದಕ್ಕೆ ಸಮಯದ ಅವಶ್ಯಕತೆ ಇದೆ.
  • ಈ ರೀತಿಯ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರಿ ಪೊಲೀಸ್ ರೊಂದಿಗೆ co-ordination ಮಾಡಿಕೊಳ್ಳುವ ಅವಶ್ಯಕತೆ ಇದ್ದು, ಸಮಯಾವಕಾಶದ ಕೊರತೆ ಎನ್ನಿಸುತ್ತಿದೆ.
  • ಇಂತಹದ ಕಾರ್ಯಕ್ರಮಗಳಲ್ಲಿ ಹೊರಗಿನಿಂದ ಡ್ರೋನ್ ಕ್ಯಾಮರಾ ಬಳಸುವ ಸಾಧ್ಯತೆ ಇರುವುದರಿಂದ Anti Drone System ಅಳವಡಿಸುವ ಅವಶ್ಯಕತೆ ಇರುತ್ತದೆ.
  • ವಿಧಾನಸೌಧ ಕಟ್ಟಡವು ಪಾರಂಪರಿಕ ಕಟ್ಟಡವಾಗುವುದರಿಂದ ಮತ್ತು Vital Installation ಕಟ್ಟಡದ ವ್ಯಾಪ್ತಿಗೆ ಒಳಪಡುವುದರಿಂದ, ಭದ್ರತೆಯ ದೃಷ್ಟಿಯಿಂದ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ, ನಿಯಮಗಳನುಸಾರ ಕಾರ್ಯಕ್ರಮ ನಡೆಸಲು ಸಮಯಾವಕಾಶದ ಅವಶ್ಯಕತೆ ಇರುತ್ತದೆ. ಅದಾಗ್ಯೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳಲಾಗುವುದು ಎಂಬ ಅಭಿಪ್ರಾಯವನ್ನು ವರದಿಯನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ : ಎರಡನೇ ಮದ್ವೆಯಾಗ್ತಿದ್ದ ಪತಿರಾಯನಿಗೆ ಮಂಟಪದಲ್ಲೇ ಚಪ್ಪಲಿ ಏಟು ಕೊಟ್ಟ ಪತ್ನಿ!

Btv Kannada
Author: Btv Kannada

Read More