ಬೆಂಗಳೂರು : ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಖದೀಮರ ಗ್ಯಾಂಗ್ ಕಟ್ಟಿಕೊಂಡು ಹೆಡ್ ಕಾನ್ಸ್ಟೇಬಲ್ ನಾಗರಾಜ್ ಗಾಂಜಾ ಡೀಲಿಂಗ್ ನಡೆಸ್ತಿದ್ದಾನೆ. ಇದೀಗ ಹೆಡ್ ಕಾನ್ಸ್ಟೇಬಲ್ನ ಗಾಂಜಾ ಸೀಕ್ರೆಟ್ನ್ನು ಬಿಟಿವಿ ಬಟಾ ಬಯಲು ಮಾಡಿದೆ. ಕಾನೂನು ಕಾಪಾಡೋ ಪೊಲೀಸೇ ಗಾಂಜಾ ಮಾಫಿಯಾ ಮಾಡಿದ್ದು, ಇದು ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿಬೀಳೋ ಸ್ಟೋರಿಯಾಗಿದೆ.
ಹೆಡ್ ಕಾನ್ಸ್ಟೇಬಲ್ ನಾಗರಾಜ್ ಹೊಸಕೋಟೆ ಠಾಣೆಯಲ್ಲೇ ಕೂತ್ಕೊಂಡು ಗಾಂಜಾ ಟೀಂ ಕಟ್ಟಿದ್ದಾನೆ. ಇದೀಗ ನಾಗರಾಜ್ & ಗಾಂಜಾ ಟೀಂ BTVಗೆ ತಗಲ್ಲಾಕ್ಕೊಂಡಿದೆ. ಯೂಸುಫ್ ಅಲಿಯಾಸ್ ಅಣ್ಣ ಯೂಸುಫ್, ಅಕ್ರಮ್, ಸಲ್ಮಾನ್ ಗಾಂಜಾ ಟೀಂ. ಈ ಟೀಂ ಕೋಲಾರದಿಂದ ಗೂಡ್ಸ್ ವಾಹನದಲ್ಲಿ ಕೆಜಿ ಗಟ್ಟಲೇ ಗಾಂಜಾ ತರಿಸಿಕೊಳ್ಳುತ್ತೆ. ನಂತರ ಬೆಂಗಳೂರು, ಬೆಂಗಳೂರು ಗ್ರಾಮಾಂತರಕ್ಕೆ ಈ ಗ್ಯಾಂಗ್ ಗಾಂಜಾ ಸಪ್ಲೈ ಮಾಡುತ್ತದೆ. ಹೊಸಕೋಟೆ ಪೊಲೀಸ್ ಠಾಣೆಯ ಹತ್ತಿರದಲ್ಲೇ ಗಾಂಜಾ ಡೀಲ್ ನಡೆಸ್ತಿದ್ದು, ಗಾಂಜಾ ಟೀಂ ಎತ್ತಾಕ್ಕೊಂಡು ಹೋಗ್ತಿದ್ದಂತೆ ನಾಗರಾಜ್ ಫುಲ್ ಆ್ಯಕ್ಟಿವ್ ಆಗಿದ್ದಾನೆ.
ಗಾಂಜಾ ಟೀಂ ಅರೆಸ್ಟ್ ಆಗದ್ದಂತೆ ನಾಗರಾಜ್ ನೋಡಿಕೊಳ್ತಿದ್ದ. ಆದ್ರೆ, ಆತನ ಗಾಂಜಾ ಡೀಲಿಂಗ್ ಟೀಂ ಅರೆಸ್ಟ್ ಆಗೋ ಹಾಗಿಲ್ಲ. ಅರೆಸ್ಟ್ ಆದ್ರೆ ನಾಗರಾಜ್ ಆ ಠಾಣೆಗೆ ದುಡ್ಡು, ಕೇಸಲ್ಲಿ ಫಿಟ್ ಆಗೋಕೆ ಹುಡುಗರನ್ನ ಕೂಡ ಕಳುಹಿಸ್ತಾನೆ. ಇನ್ನು ವ್ಯಕ್ತಿಯೊಬ್ಬರ ಬಳಿ ಯೂಸುಫ್ ವಾಟ್ಸಪ್ನಲ್ಲೇ ಮಾತಾಡ್ತಾನೆ. ಹೊಸಕೋಟೆಗೆ ಬರ್ತೀಯಾ, ಕೆಜಿ ಗಾಂಜಾಗೆ 40 ಸಾವಿರ ನೀಡ್ಬೇಕು, ಹೈ ಕ್ಲಾಸ್ ಮಾಲ್, ಗ್ರೀನ್ ಮೆಟೀರಿಯಲ್, 3 ಕ್ವಾಲಿಟಿ ಗಾಂಜಾ ಇದೆ. ಲೋ ಕ್ವಾಲಿಟಿ, ಹೈ ಕ್ವಾಲಿಟಿ ಯಾವ್ದ್ ಬೇಕೋ ಅದು ತಗೋಬಹುದು. ಸಲ್ಮಾನ್ ನಂಬರ್ ಕಳುಹಿಸಿ ಓಕೆ ಆದ್ರೆ, ಲೊಕೇಶನ್ ಸೆಂಡ್ ಮಾಡ್ತಾರೆ. ವೇಯಿಂಗ್ ಮೆಷಿನ್ ಹಿಡಿದು ವಾಟ್ಸಪ್ನಲ್ಲೇ ಗಾಂಜಾ ವೇಯ್ಟ್ ಚೆಕ್ ಮಾಡ್ತಾರೆ. ಈ ಖುಲ್ಲಂಖುಲ್ಲ ಡೀಲಿಂಗ್ನ ಅಣ್ಣ ಯೂಸುಫ್ ನಡೆಸ್ತಾನೆ.
ಗಾಂಜಾ ಹುಡುಗ್ರನ್ನಿಟ್ಟುಕೊಂಡು ಹೆಡ್ ಕಾನ್ಸ್ಟೇಬಲ್ ನಾಗರಾಜ್ ಕೋಟಿ ಕೋಟಿ ಹಣ ಮಾಡಿದ್ದು, ಹೊಸಕೋಟೆಯ SLV ಹೋಟೆಲ್ ಬಳಿ ಹತ್ತಾರು ಎಕರೆ ಜಾಗ ಹೊಂದಿದ್ದಾನೆ. ಬೆಂಗಳೂರಿಗೆ ಸೇಲಾದ ಗಾಂಜಾ ಹಣದಲ್ಲೇ ನಾಗರಾಜ ಲೈಫ್ ನಡೆಸ್ತಿದ್ದಾನೆ. ಬೆಂಗಳೂರನ್ನ ನಶೆಯಲ್ಲಿ ತೇಲೋಹಾಗೆ ಮಾಡೋ ನಾಗರಾಜನಿಗೆ ಶಿಕ್ಷೆ ಯಾವಾಗ?
ಹೋಂ ಮಿನಿಸ್ಟರ್ ಸಾಹೇಬ್ರೆ ಈ ಬಗ್ಗೆ ತನಿಖೆ ನಡೆಸಿ, ಹೆಡ್ ಕಾನ್ಸ್ಟೇಬಲ್ನ ಕೂಡಲೇ ವಜಾ ಮಾಡಿ.
ಇದನ್ನೂ ಓದಿ : ರಾಜ್ಯದಲ್ಲಿ ಜೂ.11ರಿಂದ ಮತ್ತೆ ಮಳೆ ಅಬ್ಬರ – ಈ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ!
