ಇತ್ತೀಚಿನ ದಿನಗಳಲ್ಲಿ ಕೆಲವೊಂದು ಚಿತ್ರಗಳು ತನ್ನ ವಿಶಿಷ್ಠ ಶೀರ್ಷಿಕೆಯ ಮೂಲಕವೇ ಚಿತ್ರಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಅಂಥಾ ಚಿತ್ರಗಳಲ್ಲಿ ಕಾಲವೇ ಮೋಸಗಾರ ಕೂಡ ಒಂದು. ರೊಮ್ಯಾಂಟಿಕ್ ಕಾಮಿಡಿ, ಆಕ್ಷನ್, ಎಂಟರ್ ಟೈನರ್ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಸಂಜಯ್ ಎಸ್. ಪುರಾಣಿಕ್ ಅವರು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಕಾಲವೇ ಮೋಸಗಾರ ಚಿತ್ರವು ಇದೇ ತಿಂಗಳ ಅಂತ್ಯದಲ್ಲಿ (ಜೂನ್ 20) ರಾಜ್ಯಾದ್ಯಂತ ತೆರೆ ಕಾಣಲಿದೆ. ಈಗಾಗಲೇ ತನ್ನ ಟೀಸರ್, ಹಾಡುಗಳ ಮೂಲಕ ಸಿನಿರಸಿಕರ ಮನ ಗೆದ್ದಿರುವ ಕಾಲವೇ ಮೋಸಗಾರ ಚಿತ್ರದಲ್ಲಿ ಭರತ್ ಸಾಗರ್ ಹಾಗೂ ಯಶಸ್ವಿನಿ ರವೀಂದ್ರ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭಾವಸ್ಪಂದನ ಪ್ರೊಡಕ್ಷನ್ಸ್ ಪ್ರೈ.ಲಿ. ಅಡಿಯಲ್ಲಿ ರಜತ್ ದುರ್ಗೋಜಿ ಸಾಳುಂಕೆ ಅವರ ನಿರ್ಮಾಣದಲ್ಲಿ ಅದ್ದೂರಿಯಾಗಿ ತಯಾರಾಗಿರುವ ಈ ಚಿತ್ರದ ಹಾಡುಗಳಿಗೆ ಕೆ.ಲೋಕೇಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಡಾ.ನಾಗೇಂದ್ರಪ್ರಸಾದ್, ಸಂಜಯ್ ಅವರ ಸಾಹಿತ್ಯವಿರುವ ಹಾಡುಗಳಿಗೆ ಗಾಯಕರಾದ ಆಂಟೊನಿದಾಸ್, ಸಂಚಿತ್ ಹೆಗ್ಡೆ ಅವರು ದನಿಯಾಗಿದ್ದಾರೆ. ಕ್ರಾಂತಿ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾಲವೇ ಮೋಸಗಾರ ಚಿತ್ರದ ಉಳಿದ ತಾರಾಗಣದಲ್ಲಿ ಶಂಕರ್ ಮೂರ್ತಿ, ದರ್ಶನ್ ವರ್ಣೇಕರ್, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ.
ಇದನ್ನೂ ಓದಿ : ʼಎಕ್ಕʼ ಚಿತ್ರದ ಬ್ಯಾಂಗಲ್ ಬಂಗಾರಿ ಸಾಂಗ್ ರಿಲೀಸ್ – ಯುವ ಜೊತೆ ಸಂಜನಾ ಆನಂದ್ ಬಿಂದಾಸ್ ಸ್ಟೆಪ್ಸ್!
