ಬೆಂಗಳೂರು : ಬೆಂಗಳೂರು ನಗರ ಆಯುಕ್ತರಾಗಿದ್ದ ಬಿ.ದಯಾನಂದ್ ಅವರನ್ನು ರಾತ್ರೋರಾತ್ರಿ ಸಸ್ಪೆಂಡ್ ಮಾಡಿದ ಆದೇಶದ ವಿರುದ್ದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳೂ ಕೂಡ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪೊಲೀಸ್ ಇಲಾಖೆಯಲ್ಲೂ ಅಸಮಾಧಾನ ಹೊರಬೀಳುತ್ತಿದೆ.
ಇನ್ನು ತಮ್ಮ ಅಮಾನತು ಆದೇಶದ ವಿರುದ್ಧ ಬಿ.ದಯಾನಂದ್ ಅವರು ಕಾನೂನು ಹೋರಾಟ ನಡೆಸುತ್ತಾರೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ದಯಾನಂದ್ ತಮ್ಮ ಆಪ್ತರ ಬಳಿಕ ಯಾವುದೇ ಕಾನೂನು ಹೋರಾಟ ನಡೆಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
‘ಕಳೆದ ಎರಡು ವರ್ಷಗಳ ನನ್ನ ಸೇವಾವಧಿಯಲ್ಲಿ ಬೆಂಗಳೂರಿಗೆ ಏನು ಮಾಡಿದ್ದೇನೆ ಎನ್ನುವುದು ಜನರಿಗೆ ಹಾಗೂ ನನಗೆ ಗೊತ್ತಿದೆ. ಆದ್ದರಿಂದ ಈ ಅಮಾನತು ವಿರುದ್ಧ ಕಾನೂನು ಹೋರಾಟ ಮಾಡುವುದಿಲ್ಲ. ಬದಲಿಗೆ ಇದನ್ನು ‘ಬ್ಯಾಡ್ಜ್ ಆಫ್ ಹಾನರ್’ ಎಂದುಕೊಳ್ಳುವೆ’ ಎನ್ನುವ ಮಾತನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ‘
ಇದನ್ನೂ ಓದಿ : ಬಸವೇಶ್ವರನಗರದ ಅಭಿಮಾನಿ ಛತ್ರದಲ್ಲಿ ದುರಂತ – FIR ಆದರೂ ಮಾಲೀಕರನ್ನು ಬಂಧಿಸದ ಪೊಲೀಸರು!
