ಬೆಂಗಳೂರು : ಏರ್ ಕೂಲರ್ನಿಂದ ವಿದ್ಯುತ್ ಪ್ರವಹಿಸಿ ಐದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬಸವೇಶ್ವರ ನಗರದ ಅಭಿಮಾನಿ ಕನ್ವೆನ್ಷನ್ ಹಾಲ್ನಲ್ಲಿ ನಡೆದಿದೆ. ಶಿವಂ (5) ಮೃತ ಮಗು.
ಶಿವಂ ಕೆಂಪೇಗೌಡ ನಗರದ ನಿವಾಸಿ ಪ್ರದೀಪ್ ಹಾಗೂ ದೀಪಾ ದಂಪತಿ ಪುತ್ರನಾಗಿದ್ದು, ಸಂಬಂಧಿಕರ ರಿಷಪ್ಷನ್ಗೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಜೂನ್ 4ನೇ ತಾರೀಕಿನಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕನ್ವೆನ್ಷನ್ ಹಾಲ್ನಲ್ಲಿದ್ದ ವೈಯರ್ ಕನೆಕ್ಷನ್ ಈ ದುರಂತಕ್ಕೆ ಕಾರಣವಾಗಿದೆ. ಮೆಟ್ಟಿಲು ಬಳಿ ಇಟ್ಟಿದ್ದ ಕೂಲರ್ನಲ್ಲಿ ಕರೆಂಟ್ ಪಾಸ್ ಆಗ್ತಿತ್ತು. ಈ ವೇಳೆ ಶಿವಂ ಮೆಟ್ಟಿಲು ಹತ್ತುವಾಗ ಕೂಲರ್ ಬಳಿ ಹೋಗಿದ್ದ. ಆಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಶಿವಂ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಬಸವೇಶ್ವರ ಠಾಣೆಗೆ ಮಗುವಿನ ತಂದೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದು, ಘಟನೆ ನಡೆದೂ ಮೂರು ದಿನ ಕಳೆದರೂ ಅಭಿಮಾನಿ ಕನ್ವೆನ್ಷನ್ ಹಾಲ್ ಮಾಲೀಕನ್ನು ಇನ್ನೂ ಬಂಧಿಸಿಲ್ಲ. ಸದ್ಯ ಪೊಲೀಸರ ಈ ನಡೆ ವಿರುದ್ದ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ ; ಬಿಟಿವಿಯ ಬಿಗ್ ಇಂಪ್ಯಾಕ್ಟ್ – ಮಣಿಪಾಲ್ ಆಸ್ಪತ್ರೆ ’ಕಾಮಕಾಂಡ’ದ ವಿರುದ್ಧ ಕ್ರಮಕ್ಕೆ ನಾಗಲಕ್ಷ್ಮೀ ಚೌಧರಿ ಆದೇಶ!
