ಬೆಂಗಳೂರು : ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಕಾಮಕಾಂಡಕ್ಕೆ ಇದೀಗ ಶಾಕ್ ಟ್ರೀಟ್ಮೆಂಟ್ ಸಿಕ್ಕಿದೆ. ಬಿಟಿವಿಯ ನಿರಂತರ ವರದಿ ಬೆನ್ನಲ್ಲೇ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು, ಮಣಿಪಾಲ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ‘ಕಾಮಕಾಂಡ’ದ ವಿರುದ್ಧ ಕ್ರಮಕ್ಕೆ ಆದೇಶಿಸಿ ಡಿಸಿಪಿಗೆ ಪತ್ರ ಬರೆದಿದ್ದಾರೆ.
ಹೌದು.. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಗಳಾದ ಮಣಿಪಾಲ್ ವರ್ಕರ್ಸ್ ಅಸೋಸಿಯೇಶನ್ ಯೂನಿಯನ್ ಲೀಡರ್, ರಾಜ್ ಗೋಪಾಲ್ ಹಾಗೂ ಆತನ ಸಹೋದರ ರವೀಂದ್ರ ಬಾಬು ವಿರುದ್ದ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಓಲ್ಡ್ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಮಹಿಳಾ ಸಿಬ್ಬಂದಿಗಳಿಗೆ ರಾಜಗೋಪಾಲ್ ಹಾಗೂ ರವೀಂದ್ರ ಬಾಬು ಎಂಬವರು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿತ್ತು.

ಮಣಿಪಾಲ್ ‘ಕಾಮಕಾಂಡ’ದ ಕುರಿತು ಬಿಟಿವಿಯು ನಿರಂತರವಾಗಿ ವರದಿ ಮಾಡಿತ್ತು. ಆದ್ರೆ, ಕೇವಲ ಒಂದೇ ಒಂದು FIR ಹಾಕಿ ಜೀವನ್ ಭೀಮಾನಗರ ಪೊಲೀಸರು ಸುಮ್ಮನಾಗಿದ್ದರು. ಅಲ್ಲದೇ, ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಗಳನ್ನ ಅರೆಸ್ಟ್ ಮಾಡದೇ ಬಿಟ್ಟಿದ್ದರು. ಆ ಬಳಿಕವೂ ಆರೋಪಿಗಳು ಮಣಿಪಾಲ್ ಆಸ್ಪತ್ರೆಯಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದರು.
ಇದೀಗ ಬಿಟಿವಿ ಸುದ್ದಿ ಆಧರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಡಿಸಿಪಿಗೆ ಪತ್ರ ಬರೆದು ಆರೋಪಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಆದೇಶಿಸಿದ್ದು, ಕೈಗೊಂಡ ಕ್ರಮದ ವರದಿಯನ್ನು ಶೀಘ್ರವೇ ಮಹಿಳಾ ಆಯೋಗಕ್ಕೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಇನ್ನು ಮಣಿಪಾಲ್ ‘ಕಾಮಕಾಂಡ’ದ ಹಲವು ಆರೋಪಗಳು ಬಂದ್ರೂ ಸುಮ್ಮನಿದ್ದ ಇನ್ಸ್ಪೆಕ್ಟರ್, ವಿರುದ್ದವು ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ – ನೈತಿಕ ಹೊಣೆ ಹೊತ್ತು KSCA ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ!
