ಹಾವೇರಿ : ಹಾವೇರಿಯಲ್ಲಿ ಇಡೀ ರಾಜ್ಯವೇ ನಾಚಿಕೆ ಪಡುವ ಘಟನೆಯೊಂದು ನಡೆದಿದೆ. 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ದುರುಳರು ಸರಣಿ ಅತ್ಯಾಚಾರ ನಡೆಸಿದ್ದು, ಪ್ರಿಯಕರ ಸೇರಿ ಬಾಲಕಿಯ ದೊಡ್ಡಪ್ಪನ ಮಗ (ಅಣ್ಣ) ಕೂಡ ಅತ್ಯಾಚಾರ ಎಸಗಿರುವ ದಾರುಣ ಘಟನೆ ಬಂಕಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದುರುಳರು 15 ವರ್ಷದ ಬಾಲಕಿ ಎಂದೂ ನೋಡದೇ ಮೇಲೆ ಸರಣಿ ಅತ್ಯಾಚಾರ ನಡೆಸಿ ದುಷ್ಕೃತ್ಯವೆಸಗಿದ್ದಾರೆ. ಮನೆ ಹಿಂದಿನ ಅರಣ್ಯ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದು ಗೋಣಿರುದ್ರ ಶಿಗಟ್ಟಿ, ಹೇಮಂತ, ಮಂಜುನಾಥ್ ಎಂಬವರು ಈ ನೀಚ ಕೃತ್ಯ ಎಸಗಿದ್ದಾರೆ.
ಮೊದಲಿಗೆ ಗೋಣಿರುದ್ರ ಶಿಗಟ್ಟಿ ಅಪ್ರಾಪ್ತೆಯನ್ನ ಪ್ರೀತಿಸ್ತೀನಿ ಅಂತಾ ನಂಬಿಸಿ, ಆ ಬಳಿಕ ಇದೇ ವಿಚಾರವನ್ನಿಟ್ಟುಕೊಂಡು ಅಪ್ರಾಪ್ತೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಬಳಿಕ ಸ್ನೇಹಿತರಾದ ಹೇಮಂತ ಹಾಗೂ ಮಂಜುನಾಥ ಮುಂದೆ ಲವ್ ವಿಚಾರ ಪ್ರಸ್ತಾಪಿಸಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಅತ್ಯಾಚಾರಿಗಳು ಅಪ್ರಾಪ್ತೆಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಬ್ಲ್ಯಾಕ್ ಮೇಲ್ ಮೂಲಕ 3 ಜನರು ಬಾಲಕಿ ಮೇಲೆ ಸರಣಿಯಾಗಿ ಅತ್ಯಾಚಾರ ಎಸಗಿದ್ದಾರೆ.
ಅಪ್ರಾಪ್ತೆ ಗರ್ಭಿಣಿಯಾದ ಬಳಿಕ ಅತ್ಯಾಚಾರದ ವಿಚಾರ ಬೆಳಕಿಗೆ ಬಂದಿದ್ದು, ತನ್ನ ಮೇಲೆ ನಡೆದ ಕೃತ್ಯವನ್ನು ತಾಯಿ ಬಳಿ ಬಾಲಕಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ರಾಜಿ ಪಂಚಾಯತಿ ಮಾಡಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಇದೀಗ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ್ವಯ ಪಂಚಾಯತಿ ನಡೆಸಿದ್ದ ಇಬ್ಬರೂ ಮೇಲೂ ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್!
