ಬೆಂಗಳೂರು : ಆರ್ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸೇರಿದಂತೆ DNA ಇವೆಂಟ್ ಮ್ಯಾನೇಜ್ಮೆಂಟ್ ಸಿಬ್ಬಂದಿಗಳಾದ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಎಂಬವರನ್ನು ಸಿಸಿಬಿ ಪೊಲೀಸರು ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತೀವ್ರತರದ ವಿಚಾರಣೆಗೆ ಒಳಪಡಿಸಲಾಗಿದೆ.

ಸದ್ಯ ಸಾರ್ವಜನಿಕ ವಲಯದಲ್ಲಿ ಕಾಲ್ತುಳಿತ ಘನಘೋರ ದುರಂತಕ್ಕೆ ಹೊಣೆ ಯಾರು? ಎಂಬ ಚರ್ಚೆಗಳು ನಡೆಯುತ್ತಿದ್ದು, ಕೂಡಲೇ ಈ ದುರಂತಕ್ಕೆ ಕಾರಣರಾವಾದ ಪ್ರಭಾವಿಗಳ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಹೌದು.. 11 ಜೀವ ಬಲಿ ಪಡೆದ RCB ಮ್ಯಾನೇಜ್ಮೆಂಟ್ ಹೆಡ್ ಅರೆಸ್ಟ್ ಯಾವಾಗ? KSCA ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್ ಅವರನ್ನೂ ಅರೆಸ್ಟ್ ಮಾಡ್ಬೇಕು.. KSCA ಖಜಾಂಚಿ ಜಯರಾಮ್ ಬಂಧನ ಮಾಡಬೇಕೆಂಬ ಆಗ್ರಹಗಳು ಕೇಳಿಬಂದಿದೆ. ಹಾಗೆಯೇ DNA ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥಾಪಕ ಟಿ. ವೆಂಕಟ್ ವರದನ್ ಅವರನ್ನೂ ಕೂಡಲೇ ಬಂಧಿಸಕೇಂದು ಆಗ್ರಹಿಸಲಾಗಿದೆ.


ಇದೀಗ ಈ ವಿಚಾರ ತಿಳಿಯುತ್ತಿದ್ದಂತೆ KSCA ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್, DNA-ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥಾಪಕ ವೆಂಕಟ್ ವರದನ್, KSCA ಖಜಾಂಚಿ ಜಯರಾಮ್ ಬೆಂಗಳೂರಿನಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು RCB, KSCA, DNA ಆಡಳಿತ ಚಿನ್ನಸ್ವಾಮಿ ಸ್ಟೇಡಿಯಂ ಅನ್ನೇ ದಂಧೆಯನ್ನಾಗಿಸಿರುವ ಸ್ಫೋಟಕ ಅಂಶವು ಕೂಡ ಹೊರಬಿದ್ದಿದೆ.


ಇದನ್ನೂ ಓದಿ : ಕಾಲ್ತುಳಿತ ಕೇಸ್ನಲ್ಲಿ MLC ಗೋವಿಂದರಾಜ್ ಪಾತ್ರ ರಿವೀಲ್ – ಯಾವುದೇ ಕ್ಷಣದಲ್ಲಿ ಅರೆಸ್ಟ್?
