ಭಾರದ ಮನಸ್ಸಿನಲ್ಲೇ ಬೆಂಗಳೂರಿನಿಂದ ಮುಂಬೈಗೆ ಹೊರಟ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ!

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಘೋರ ದುರಂತ ಇಡೀ ಆರ್​ಸಿಬಿ ತಂಡವನ್ನು ಹಾಗೂ ಅದರ ಅಭಿಮಾನಿಗಳನ್ನು ನೋವಿನ ಸಾಗರದಲ್ಲಿ ಮುಳುಗಿಸಿದೆ. ಇತ್ತ ನಾವು ಟ್ರೋಫಿಯೊಂದಿಗೆ ಬರುವುದನ್ನು ಅಭಿಮಾನಿಗಳು ನೋಡಿ ಕಣ್ತುಂಬಿಕೊಳ್ಳಲಿ ಎಂದು ಆಸೆ ಪಟ್ಟಿದ್ದ ಆರ್​ಸಿಬಿ ತಂಡಕ್ಕೆ 11 ಅಭಿಮಾನಿಗಳ ಸಾವಿನ ಆಘಾತ ಬೇಸರ ನೀಡಿದೆ. ಹೀಗಾಗಿ ತಂಡದ ಆಟಗಾರರು ಒಲ್ಲದ ಮನಸಿನಲ್ಲೇ 15 ನಿಮಿಷಗಳ ಕಾರ್ಯಕ್ರಮ ನೀಡಿ ಕ್ರೀಡಾಂಗಣದಿಂದ ಹೊರನಡೆದಿದ್ದರು.

ಇದೀಗ ವಿರಾಟ್ ಕೊಹ್ಲಿ ಕೂಡ ತಂಡದ ಕೆಲಸಗಳನ್ನೆಲ್ಲ ಮುಗಿಸಿ, ಬೆಂಗಳೂರು ತೊರೆದಿದ್ದಾರೆ. ಆರ್​ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಭಾರದ ಮನಸಿನೊಂದಿಗೆ ಮುಂಬೈಗೆ ತೆರಳಿದ್ದಾರೆ. ಇವರಿಬ್ಬರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಜಯೋತ್ಸವದ ಮೆರವಣಿಗೆಯ ಸಮಯದಲ್ಲಿ ನಡೆದ ದುರಂತದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಂತಾಪ ಸೂಚಿಸಿದ್ದ ಕೊಹ್ಲಿ, ‘ನನಗೆ ಹೇಳಲು ಪದಗಳಿಲ್ಲ. ಈ ಘಟನೆ ಬೇಸರ ತರಿಸಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಘನ ಘೋರ ದುರಂತ – ಕರ್ನಾಟಕ ಕ್ರಿಕೆಟ್ ಕ್ರೀಡಾ ಸಂಘದ ಪದಾಧಿಕಾರಿಗಳ ವಿರುದ್ಧ ಹೈಕೋರ್ಟ್​ ವಕೀಲ ದೂರು!

Btv Kannada
Author: Btv Kannada

Read More