ಬೆಂಗಳೂರು : ಪೌರ ಕಾರ್ಮಿಕನಿಗೆ ಜಾತಿ ನಿಂದನೆ, ಕೊಲೆ ಬೆದರಿಕೆಯೊಡ್ಡಿದ ಬಿಜೆಪಿ ಮುಖಂಡ NR ರಮೇಶ್ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಈ ಪ್ರಕರಣ ಸಂಬಂಧ SC/ST ಆ್ಯಕ್ಟ್ ಅಡಿ NR ರಮೇಶ್ ವಿರುದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ FIR ದಾಖಲಾಗಿದ್ದರೂ ಸಹ NR ರಮೇಶ್ರನ್ನು ಪೊಲೀಸರು ಇನ್ನೂ ಅರೆಸ್ಟ್ ಮಾಡಿಲ್ಲ.
ದಿನೇಶ್ ಎಂಬ ಯುವಕನಿಗೆ NR ರಮೇಶ್ ಜಾತಿ ನಿಂದನೆ, ಕೊಲೆ ಬೆದರಿಕೆಯೊಡ್ಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ BNS ಸೆಕ್ಷನ್ 115(2), 351(2), 352 & SC/ST ಆ್ಯಕ್ಟ್ ಅಡಿ NR ರಮೇಶ್ ವಿರುದ್ದ ಪ್ರಕರಣ ದಾಖಲಾಗಿದೆ.
ಕಸ ವಿಲೇವಾರಿ ಟೆಂಡರ್ ಬಗ್ಗೆ NR ರಮೇಶ್ ಪೌರ ಕಾರ್ಮಿಕನಿಗೆ ಕೊಲೆ ಬೆದರಿಕೆ ಹಾಕಿದ್ದು, NR ರಮೇಶ್ ಗೂಂಡಾಗಿರಿ, ಜಾತಿ ನಿಂದನೆ ಬಗ್ಗೆ ಯುವಕ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ದೂರುದಾರ ದಿನೇಶ್ ಟೆಂಡರ್ಗಾಗಿ ಜಗಳ ಮಾಡ್ತಿದ್ದ ವೇಣುಗೋಪಾಲ್ ಹಾಗೂ ಮಂಜುನಾಥ್ ಜಗಳ ಬಿಡಿಸಲು ಹೋಗಿದ್ದ. ಆಗ ನಿನ್ನ ಮೇಲೆ ಕಳ್ಳತನ ಕೇಸ್ ಹಾಕಿಸುತ್ತೇನೆ ಎಂದು NR ರಮೇಶ್ ಬೆದರಿಕೆ ಹಾಕಿದ್ದಾರೆ.
ಬಡವ ಬಡವನಂತಿರು… ಕಾಲು ಚಿಪ್ಪು ಒಡೆಸ್ತೀನಿ ಎಂದು NR ರಮೇಶ್ ಬೆದರಿಸಿದ್ದು, ‘ಅವನನ್ನು ಎತ್ತಾಕ್ಕೊಂಡು ಬನ್ರೋ’ ಎಂದು ತನ್ನ ಸಹಚರರಿಗೆ ಎನ್. ಆರ್ ರಮೇಶ್ ಹೇಳಿದ್ದಾರೆ.
ಈ ಸಂಬಂಧ ಕಾಲ್ ರೆಕಾರ್ಡ್ ಸಹಿತ ಎನ್. ಆರ್ ರಮೇಶ್ ವಿರುದ್ದ ದಿನೇಶ್ ದೂರು ನೀಡಿದ್ದಾನೆ. FIR ಆದ್ರೂ ಬಿಜೆಪಿ ಮುಖಂಡ NR ರಮೇಶ್ರನ್ನು ಪೊಲೀಸರು ಇನ್ನು ಅರೆಸ್ಟ್ ಮಾಡಿಲ್ಲ. ಇದೀಗ ಬಿಜೆಪಿ ಮುಖಂಡ NR ರಮೇಶ್ ಬಂಧನ ಯಾಕಿಲ್ಲ? ರಾಜಕೀಯ ನಾಯಕರಿಗೊಂದು ಕಾನೂನು.. ಜನರಿಗೊಂದು ಕಾನೂನಾ? ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ : ಭಾರತದ ಹೆಸರಾಂತ ವಾದ್ಯಗಾರರ ಸಾರಥ್ಯದಲ್ಲಿ’ಮಾರುತ’ ಚಿತ್ರದ ರೀ-ರೆಕಾರ್ಡಿಂಗ್!
