ಅಹಮದಾಬಾದ್ : ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ IPL ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
RCB ಗೆಲುವಿನ ಬಳಿಕ ಮಾತನಾಡಿದ ಕಿಂಗ್ ವಿರಾಟ್ ಕೊಹ್ಲಿ, ನನ್ನ ಹೃದಯ ಬೆಂಗಳೂರಿಗಾಗಿ… ನನ್ನ ಆತ್ಮ ಬೆಂಗಳೂರಿಗಾಗಿ… ನಾನು ಐಪಿಎಲ್ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ.. ಎಂದು ಭಾವುಕವಾಗಿ ಮಾತಗಳನ್ನಾಡಿದ್ದಾರೆ.
ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ : ಕಪ್ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವು ಕೊಟ್ಟರು.
ಇದನ್ನೂ ಓದಿ : RCB ಟ್ರೋಫಿ ಗೆಲ್ಲುತ್ತಿದ್ದಂತೆ ವಿಜಯ್ ಮಲ್ಯ ಫುಲ್ ಖುಷ್.. ಹೇಳಿದ್ದೇನು ಗೊತ್ತಾ?
