ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ದಿ ರಾಜಾ ಸಾಬ್’ ರಿಲೀಸ್​ ಡೇಟ್​ ಅನೌನ್ಸ್​​!

ಪ್ಯಾನ್ ಇಂಡಿಯನ್ ಹೀರೋ ಪ್ರಭಾಸ್‌ ನಟನೆಯ “ರಾಜಾ ಸಾಬ್” ಸಿನಿಮಾದಿಂದ ಬಿಗ್ ಅಪ್ಡೇಡ್ ಹೊರಬಿದ್ದಿದೆ. ಈಗಾಗಲೇ ಪೋಸ್ಟರ್ ಮತ್ತು ಝಲಕ್ ಮೂಲಕ ಗಮನ ಸೆಳದಿದ್ದ ಈ ಸಿನಿಮಾ, ಇದೀಗ ಬಿಡುಗಡೆಯ ಸುದ್ದಿಯ ಜತೆ ಆಗಮಿಸಿದೆ. ಅಂದರೆ, ಇದೇ ವರ್ಷದ ಡಿಸೆಂಬರ್ 5ರಂದು “ದಿ ರಾಜಾ ಸಾಬ್” ಸಿನಿಮಾ ತೆರೆಗೆ ಬರಲಿದೆ. ಇದೇ ಜೂನ್ 16ರಂದು ಟೀಸರ್ ಸಹ ಬಿಡುಗಡೆ ಆಗಲಿದೆ.

ಈ ವರೆಗೂ ಆಕ್ಷನ್ ಅವತಾರದಲ್ಲಿಯೇ ಹೆಚ್ಚು ಮಿಂಚಿದ್ದ ನಟ ಪ್ರಭಾಸ್, ಇದೇ ಮೊದಲ ಬಾರಿಗೆ “ದಿ ರಾಜಾ ಸಾಬ್” ಸಿನಿಮಾ ಮೂಲಕ ಹಾರರ್ ಪ್ರಯತ್ನಕ್ಕಿಳಿದಿದ್ದಾರೆ. ಮೊದಲ ಮೋಷನ್ ಪೋಸ್ಟರ್ ನಲ್ಲಿಯೇ ಸೂಪರ್ ನ್ಯಾಚುರಲ್ ಎಳೆಯ ಹಿಂಟ್ ಕೊಟ್ಟಿದ್ದ ಈ ಸಿನಿಮಾ, ಇದೀಗ ಟೀಸರ್ ಬಿಡುಗಡೆ ದಿನಾಂಕದ ಜತೆಗೆ ಚಿತ್ರಮಂದಿರಕ್ಕೆ ಆಗಮಿಸುವುದಕ್ಕೂ ಮುಹೂರ್ತ ಫಿಕ್ಸ್ ಆಗಿದೆ.

ಮಾರುತಿ ನಿರ್ದೇಶನದ “ದಿ ರಾಜಾ ಸಾಬ್” ಭಯ ಮತ್ತು ಮನರಂಜನೆಯ ವಿಶಿಷ್ಟ ಮಿಶ್ರಣ ನೀಡುವ ಒಂದು ಪ್ರಯತ್ನ. ಬಿಡುಗಡೆಗೊಂಡಿರುವ ಪೋಸ್ಟರ್‌ಗಳು ಮತ್ತು ಝಲಕ್‌ಗಳು ಈಗಾಗಲೇ ಪ್ರೇಕ್ಷಕರನ್ನು ಆಶ್ಚರ್ಯ ಚಕಿತಗೊಳಿಸಿವೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ, ಟಿ.ಜಿ. ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿದೆ. ಈ ಚಿತ್ರಕ್ಕೆ ಕಾರ್ತಿಕ್ ಪಲನಿ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಥಮನ್ ಎಸ್ ಭರ್ಜರಿ ಸಂಗೀತ ನೀಡುತ್ತಿದ್ದಾರೆ.ಮಾಳವಿಕಾ ಮೋಹನನ್, ನಿಧಿ ಅಗರವಾಲ್ ಮತ್ತು ರಿಧಿ ಕುಮಾರ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ರಿಲೀಸ್ ಆಗುತ್ತಿರುವ ಈ ಚಿತ್ರ, ಕೇವಲ ಒಂದು ಸಿನಿಮಾ ಅಲ್ಲ — ಇದು ನಿಜವಾದ ಥಿಯೇಟ್ರಿಕಲ್ ಇವೆಂಟ್, ಎಲ್ಲ ಅಳತೆಗಳನ್ನೂ ಮೀರುವ ವಿಶಿಷ್ಟ ಸಿನಿಮಾ ಸಾಲಿಗೆ ಸೇರುವ ಚಿತ್ರವಾಗುವ ಹಾದಿಯಲ್ಲಿದೆ.

ಇದನ್ನೂ ಓದಿ : ಸಾಯಿಪ್ರಕಾಶ್ ನಿರ್ದೇಶನದ ‘ಸೆಪ್ಟೆಂಬರ್ 10’ ಚಿತ್ರದ ಟೀಸರ್ ಔಟ್!

Btv Kannada
Author: Btv Kannada

Read More