ಬೆಂಗಳೂರು : ‘ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡಿಲ್ಲದೇ ತಪ್ಪೇ ಮಾಡಿಲ್ಲ, ಕ್ಷಮೆಯೂ ಕೇಳಲ್ಲ ಎಂದು ಪಟ್ಟು ಹಿಡಿದಿರೋ ನಟ ಕಮಲ್ ಹಾಸನ್‌ಗೆ ತಕ್ಕ ಪಾಠ ಕಲಿಸಲು ಕನ್ನಡಿಗರು ಮುಂದಾಗಿದ್ದಾರೆ.
ಜೂನ್ 5ರಂದು ರಿಲೀಸ್‌ಗೆ ಸಜ್ಜಾಗಿರುವ ಕಮಲ್ ಹಾಸ ಅಭಿನಯದ ‘ಥಗ್ ಲೈಫ್’ ಚಿತ್ರದ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಬ್ಯಾನ್ ಬಿಸಿ ತಟ್ಟಿದೆ. ಈ ನಡುವೆ ನಿನ್ನೆ ಚಿತ್ರಕ್ಕೆ ಅಡ್ಡಿಪಡಿದಂತೆ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇಂದು ಹೈಕೋರ್ಟ್ನಲ್ಲಿ ‘ಥಗ್ ಲೈಫ್’ ಚಿತ್ರ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ. ಚಿತ್ರ ಬಿಡುಗಡೆ ಪ್ರದರ್ಶನಕ್ಕೆ ನಿರ್ಬಂಧ ವಿಧಿಸಬಾರದು, ಸಿನಿಮಾ ವೀಕ್ಷಣೆ ವೇಳೆ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಇಂಟರ್ನಾಷ್ಯಾನಲ್ ನಿರ್ಮಾಣ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆಯೂ, ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠದಲ್ಲಿ ನಡೆಯಲಿದೆ.
ಸದ್ಯ ದುಬೈನಲ್ಲಿರುವ ಕಮಲ್ ಹಾಸನ್ ಇಂದು (ಜೂ.3) ಚೆನ್ನೈಗೆ ಬರಲಿದ್ದಾರೆ. ಆದರೆ, ಕ್ಷಮೆ ಕೇಳದ ಹೊರತು ಥಗ್ ಲೈಫ್ ಸಿನಿಮಾ ರಿಲೀಸ್‌ಗೆ ಅವಕಾಶ ಕೊಡೋದೇ ಇಲ್ಲ ಅಂತ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ : ಅಭಯಾರಣ್ಯದ ಮೂಲಕ ತಮ್ಮ ಜಮೀನಿಗೆ ತೆರಳಲು ಸಚಿವ ಜಾರ್ಜ್ ಪುತ್ರನಿಗೆ ಹೈಕೋರ್ಟ್ ಅನುಮತಿ!
