ಚಿಕ್ಕಬಳ್ಳಾಪುರ : ಮೀನು ಹಿಡಿಯಲು ಹೋದ ಯುವಕ ನೀರುಪಾಲು!

ಚಿಕ್ಕಬಳ್ಳಾಪುರ : ಮೀನು ಹಿಡಿಯಲು ಹೋಗಿ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿ ಗ್ರಾಮದ ಉತ್ತರ ಪಿನಾಕಿನಿ ನದಿಯಲ್ಲಿ ನಡೆದಿದೆ.

ಗೌರಿಬಿದನೂರಿನ ನಾಗಪ್ಪ ಕಾಲೋನಿ ಕ್ರಿಶ್ಚಿಯನ್ ನಗರದ ಮಿಷೆಲ್ ಜಾನ್ಸನ್ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಮೀನು ಹಿಡಿಯಲು ಉತ್ತರ ಪಿನಾಕಿನಿ ನದಿಗೆ ಹೋಗಿದ್ದ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆದರೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ನದಿ ನೀರಿನಲ್ಲಿ ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ಧಾರೆ. ಗೌರಿಬಿದನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರ : ಲಾಂಗ್​ನಲ್ಲಿ ಬರ್ತಡೇ ಕೇಕ್​ ಕತ್ತರಿಸಿದ ಆಟೋ ಚಾಲಕ ಅರೆಸ್ಟ್!

Btv Kannada
Author: Btv Kannada

Read More