ಚಿಕ್ಕಬಳ್ಳಾಪುರ : ಲಾಗ್ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಆಚರಿಸಿಕೊಂಡ ಯುವಕನೋರ್ವ ಪೋಲೀಸರ ಅತಿಥಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಕಳೆದ ಶನಿವಾರ ನಡೆದಿದೆ.
ಗೌರಿಬಿದನೂರಿನ ವೈಚಕೂರಹಳ್ಳಿ ಗ್ರಾಮದ ಅನಿಲ್ ಕುಮಾರ್ (24) ಎಂಬಾತನ ಹುಟ್ಟುಹಬ್ಬಕ್ಕೆ ಆತನ ಗೆಳೆಯರು ಕೇಕ್ ತಂದಿದ್ದರು. ಈ ವೇಳೆ ರೌಡಿಗಳ ರೀತಿಯಲ್ಲಿ ಅನಿಲ್ ಕುಮಾರ್ ಲಾಂಗ್ನಿಂದ ಬರ್ತ್ ಡೇ ಕೇಕ್ ಕಟ್ ಮಾಡಿದ್ದಾನೆ.
ಈ ಸಂದರ್ಭದ ವಿಡಿಯೋವನ್ನು ಆತನ ಗೆಳೆಯರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಅನಿಲ್ನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ವಿನೋದ್ ಪ್ರಭಾಕರ್, ಸೋನಾಲ್ ಅಭಿನಯದ ಬಹುನಿರೀಕ್ಷಿತ ‘ಮಾದೇವ’ ಸಿನಿಮಾ ಜೂನ್ 6ಕ್ಕೆ ತೆರೆಗೆ!

Author: Btv Kannada
Post Views: 526