ಬೆಂಗಳೂರು : ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (KMF) ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಾಲಿನ ಮಹತ್ವ ಹಾಗೂ ಅರಿವು ಮೂಡಿಸಲು ಮತ್ತು ಡೈರಿ ಕ್ಷೇತ್ರವನ್ನು ಉತ್ತೇಜಿಸಲು ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರತಿ ವರ್ಷ ಜೂನ್ 1ರಂದು ವಿಶ್ವ ಹಾಲು ದಿನವನ್ನು ಆಚರಿಸುತ್ತದೆ.
ಈ ಸಂಬಂಧ ಕೆಎಂಎಫ್ ಕೂಡ ಹಾಲು ದಿನಾಚರಣೆ ಆಚರಿಸಿತು. ಇದೇ ವೇಳೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಮೂರು ಮಾದರಿಯ 18 ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಮಫಿನ್ಸ್, ಬಾರ್ ಕೇಕ್ ಮತ್ತು ಸ್ಲೈಸ್ ಕೇಕ್, ಸ್ಪಾಂಜ್ ವೆನಿಲ್ಲಾ ಕೇಕ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
18 ಹೊಸ ಉತ್ಪನ್ನಗಳು ಸ್ಲೈಸ್ ಕೇಕ್ ಫ್ರೂಟ್, ವೆನಿಲ್ಲಾ, ಪೈನಾಪಲ್ ಚಾಕೋ ಆರೆಂಜ್ ನಂತಹ ವಿಭಿನ್ನ ಫ್ಲೆವರ್ ಹೊಂದಿದೆ. ಸದ್ಯ 30 ಮತ್ತು 50 ಗ್ರಾಂ ತೂಕದ ಸ್ಲೈಸ್ ಕೇಕ್ ಮಾತ್ರ ಮಾರುಕಟ್ಟೆಗೆ ಬಂದಿದೆ. ಸ್ಪಾಂಜಿ ವೆನಿಲ್ಲಾ ಕೇಕ್ನ 25 ಗ್ರಾಂ ಪ್ಯಾಕೆಟ್ಗೆ ಗರಿಷ್ಠ 10 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನು ಮಕ್ಕಳು ಇಷ್ಟಪಡುವ ಮಫಿನ್ಸ್ ಕೇಕ್ ವೆನಿಲ್ಲಾ, ಚಾಕಲೇಟ್, ಪೈನಾಪಲ್, ಸ್ಟ್ರಾಬೆರಿ ಮತ್ತು ಮಾವಾ ಫ್ಲೇವರ್ನೊಂದಿಗೆ ಮಾರುಕಟ್ಟೆಗೆ ಬಂದಿದೆ. 150 ಗ್ರಾಂನ ಮಫಿನ್ಸ್ ಕೇಕ್ಗೆ 50 ರೂಪಾಯಿ ದರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ದೇಶ ಹಾಗೂ ವಿದೇಶದಲ್ಲಿ ಜನರ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ನಂದಿನಿ ಕರುನಾಡಿನ ಪ್ರತಿಷ್ಠೆಯಾಗಿದೆ. ಕ್ವಾಲಿಟಿಯಲ್ಲಿ ರಾಜಿಯಾಗದೆ ಮಾರುಕಟ್ಟೆಗೆ ಬರುವ ನಂದಿನಿ ಉತ್ಪನ್ನಗಳು ಜನರ ಫೇವರೆಟ್ ಆಗಿವೆ. ಇದೇ ಕಾರಣಕ್ಕೆ ಕೆಎಂಎಫ್ನ ಉತ್ಪನ್ನಗಳು ಖಾಸಗಿ ಉದ್ಯಮಗಳಿಗೆ ಠಕ್ಕರ್ ಕೊಡುತ್ತಿವೆ. ಇದರೊಂದಿಗೆ ಇವತ್ತು ನೂತನ ಉತ್ಪನ್ನಗಳು ಸೇರ್ಪಡೆ ಆಗಿವೆ.
ಯಾವುದಕ್ಕೆ ಎಷ್ಟು ಬೆಲೆ? ಸ್ಪಾಂಜಿ ವೆನಿಲ್ಲಾ ಕೇಕ್ 25 ಗ್ರಾಂ ಗೆ ರು.10, ಫೂಟಿ ಸ್‌ಕೇಕ್ 30 ಗ್ರಾಂ ಗೆ ರು.1-5, ಚಾಕೋ ಕಿತ್ತಲೆ ಸ್ಪೇಸ್ ಕೇಕ್, ವೆನಿಲ್ಲಾ ಸ್ಸೆಸ್ ಕೇಕ್, ಅನಾನಸ್ ಸ್ಟೈಸ್ ಕೇಕ್ 50 ಗ್ರಾಂ ಗೆ ರು.15- ರಿಂದ 20 ಹಾಗೂ ವೆನಿಲ್ಲಾ ಮಫಿನ್, ಚಾಕಲೇಟ್ ಮಫಿನ್, ಅನಾನಸ್ ಮಫಿನ್, ಸ್ಟ್ರಾಬೆರಿ ಮಫಿನ್, ಮಾವಾ ಮಫಿನ್ 150 ಗ್ರಾಂಗೆ ರು.50, ಪ್ಲಮ್ ಕೇಕ್, ಜಾಕೋ ವೆನಿಲ್ಲಾ ಕೇಕ್, ಫೂಟ್ ಕೇಕ್, ವೆನಿಲ್ಲಾ ಕೇಕ್, ಚಾಕೊಲೇಟ್ ಕೇಕ್, ವಾಲ್ನಟ್ ಬನಾನಾ ಕೇಕ್, ಚಾಕಲೇಟ್ ಬೆಲ್ಲದ ಕೇಕ್ ಹಾಗೂ ಕೊಬ್ಬರಿ ಬೆಲ್ಲದ ಕೇಕ್ 200 ಗ್ರಾಂ ಗೆ ರು.110 ದರವನ್ನು ನಿಗದಿಪಡಿಸಲಾಗಿದೆ.
ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ ಉತ್ಪನ್ನಗಳು ಮಾತ್ರವಲ್ಲದೆ ಬ್ರೆಡ್, ಬನ್‌ಮ ಐಸ್‌ಕ್ರೀಂ ಸೇರಿದಂತೆ ಈಗಾಗಲೇ ನಂದಿನಿಯ 150ಕ್ಕೂ ಅಧಿಕ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು, ಈಗಾಗಲೇ ಶಿಮುಲ್ ವತಿಯಿಂದ 100 ಗ್ರಾಂ ಪ್ಯಾಕ್‌ನಲ್ಲಿ ಖೋವಾ ಕಡಲೇ ಮಿಠಾಯಿಯನ್ನು ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ 5 ರು. ನ 12 ಗ್ರಾಂನ ಹಾಗೂ 10 ರು.ಗಳಲ್ಲಿ 25 ಗ್ರಾಂನ ಪ್ಯಾಕ್‌ಗಳಲ್ಲಿ ಸಹ ಖೋವಾ ಕಡಲೆ ಮಿಠಾಯಿಯನ್ನು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಉತ್ಪನ್ನದ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಜನಪ್ರಿಯತೆ ಹೊಂದಿರುವ ನಂದಿನಿ ಉತ್ಪನ್ನಗಳು ಗ್ರಾಹಕರ ಮನ್ನಣೆಗಳಿಸಿದೆ.
ಇದನ್ನೂ ಓದಿ : ಮುಂಬೈ ಮಣಿಸಿದ ಶ್ರೇಯಸ್ ಪಡೆ.. ಫೈನಲ್ನಲ್ಲಿ ಚೊಚ್ಚಲ ಟ್ರೋಫಿಗಾಗಿ ನಾಳೆ ಆರ್ಸಿಬಿ-ಪಂಜಾಬ್ ಹೈವೋಲ್ಟೆಜ್ ಫೈಟ್!
