ಮಯೂರ್ ಕಡಿ ನಿರ್ದೇಶನದ ‘ಮಾತೊಂದ ಹೇಳುವೆ’ ಚಿತ್ರ ಜೂ.20ಕ್ಕೆ ರಿಲೀಸ್!

ವಿಭಿನ್ನ ರೀತಿಯ ಪ್ರಚಾರ ತಂತ್ರಗಳ ಮೂಲಕ ಗಮನ ಸೆಳೆದಿರೋ ಮಯೂರ್ ಕಡಿ ನಿರ್ದೇಶನದ ‘ಮಾತೊಂದ ಹೇಳುವೆ’ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆದ ಕ್ಷಣದಿಂದಲೇ ಟ್ರೇಲರ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಟ್ರೇಲರ್ ಬಿಡುಗಡೆಗೂ ಪೂರ್ವಭಾವಿಯಾಗಿ ಚಿತ್ರತಂಡ ‘ ಟ್ರೇಲರ್ ಡಿಕೋಡ್’ ಸ್ಪರ್ಧೆ ಹೊರಬಿಟ್ಟಿತ್ತು. ಚಿತ್ರದ ನಾಯಕ ಮತ್ತು ನಾಯಕಿಯ ಡೈಲಾಗ್ ಮ್ಯೂಟ್ ಮಾಡಿ, ಜನರಿಗೆ ಡೈಲಾಗ್ ಊಹಿಸಲು ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಸರಿ ಉತ್ತರ ನೀಡಿದ ಮೊದಲ 5 ಜನರಿಗೆ ತಲಾ 5,000 ನಗದು ಬಹುಮಾನ ಎಂದು ಘೋಷಿಸಲಾಗಿತ್ತು. ಈಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ವಿಜೇತರಿಗೆ ಬಹುಮಾನ ಕೊಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಹುಬ್ಬಳ್ಳಿ – ಧಾರವಾಡ ಹುಡುಗ ಹಾಗೂ ಮೈಸೂರು ಭಾಗದ ಹುಡುಗಿಯ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಮಯೂರ್ ಕಡಿ, ರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಕೆಲವು ಕಂಟೆಂಟ್​ಗಳ ಮೂಲಕ ಪ್ರೇಕ್ಷಕರ ಮನ ತಲುಪಿರುವ ‘ಮಾತೊಂದ ಹೇಳುವೆ’ ಚಿತ್ರ ಜೂನ್ 20 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : IPS ಅಧಿಕಾರಿ ಡಿ. ಶಿಲ್ಪಾ ಅವರನ್ನು ಕೇರಳದಿಂದ ಕರ್ನಾಟಕ ಕೇಡರ್‌ಗೆ ವರ್ಗಾಯಿಸಲು ಹೈಕೋರ್ಟ್ ಆದೇಶ!

Btv Kannada
Author: Btv Kannada

Read More