ಹುಬ್ಬಳ್ಳಿ : ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಹುಬ್ಬಳ್ಳಿಯಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಉದ್ಘಾಟನೆ ಮಾಡಿದ ಬಳಿಕ ನಟ ಕಮಲ್ ಹಾಸನ್ ನೀಡಿದ ಹೇಳಿಕೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಈ ಬಗ್ಗೆ ನಟಿ ರಚಿತಾ ರಾಮ್ ಮಾತನಾಡಿದ ಅವರು, ಚಿತ್ರರಂಗದಲ್ಲಿ ಹಲವಾರು ಅಭಿಮಾನಿ ಬಳಗವನ್ನು ಹೊಂದಿರುವ ಕಮಲ್ ಹಾಸನ್ ಅವರು ಈ ರೀತಿ ಕನ್ನಡದ ಬಗ್ಗೆ ಮಾತನಾಡಿರುವುದು ಸಮಂಜಸವಲ್ಲ. ಈ ಬಗ್ಗೆ ಅವರು ಕ್ಷಮೆಯಾಚಿಸಬೇಕು ಎಂದು ನಾನು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದೆ ಇಂದು ಕೂಡಾ ಅದನ್ನೇ ಆಗ್ರಹಿಸ್ತಿದ್ದೇನೆ ಎಂದರು.
ಥಗ್ ವಾರ್ ಚಲನಚಿತ್ರ ವಿಷಯಗಳ ಕುರಿತು ಚಿತ್ರರಂಗದ ಹಿರಿಯರು ನಿರ್ಧರಿಸುತ್ತಾರೆ. ಈ ಬಗ್ಗೆ ನಾನು ಏನೂ ಹೇಳಲ್ಲ ಎಂದು ನಟಿ ರಚಿತಾ ರಾಮ್ ಹೇಳಿದ್ದಾರೆ.
ಇದನ್ನೂ ಓದಿ : ‘ಚೌಕಿದಾರ್’ ಚಿತ್ರದ ಫಸ್ಟ್ ಸಾಂಗ್ ರಿಲೀಸ್.. ಇದು ಅಪ್ಪ-ಮಗನ ಬಾಂಧವ್ಯದ ಹಾಡು!

Author: Btv Kannada
Post Views: 272