ಮಂಡ್ಯದಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ – ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವು!

ಮಂಡ್ಯ : ಪೊಲೀಸರ ಬಳಿಕ ವೈದ್ಯರ ನಿರ್ಲಕ್ಷ್ಯಕ್ಕೆ ಮಂಡ್ಯದಲ್ಲಿ ಮತ್ತೊಂದು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ನೆಲ್ಲೂರು ಗ್ರಾಮದ ಸಾನ್ವಿ(7) ಮೃತ ಬಾಲಕಿ. ಪಾದದ ಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮೃತಪಟ್ಟಿದ್ದು, ಮಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಮೃತ ಮಗುವಿನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಟೈಲ್ಸ್‌ ಬಿದ್ದು ಬಾಲಕಿ ಸಾನ್ವಿಯ ಪಾದದ ಮೂಳೆ ಮುರಿದಿತ್ತು. ಹಾಗಾಗಿ ತಂದೆ ನಿಂಗರಾಜು ಮೇ 29ರ ಗುರುವಾರ ಮಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಎಲ್ಲಾ ಪರೀಕ್ಷೆಗಳ ನಂತರ ಗುರುವಾರ ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಪರೇಷನ್‌ ಬಳಿಕ ರಾತ್ರಿಯೇ ಸಾನ್ವಿಯನ್ನ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆಯೇ ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣವೇ ತೀರ್ವ ನಿಗಾ ಘಟಕಕ್ಕೆ ಸಾನ್ವಿಯನ್ನು ಶಿಪ್ಟ್ ಮಾಡಲಾಗಿತ್ತು.

ಶನಿವಾರ ಬೆಳಗ್ಗೆ ಡ್ರಿಪ್ಸ್‌ ಮೂಲಕ ಔಷಧಿ ನೀಡಲಾಗಿತ್ತು. ಔಷಧಿ ನೀಡ್ತಿದ್ದಂತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಬಾಲಕಿ ಸಾನ್ವಿ ಶನಿವಾರ ರಾತ್ರಿ 10:30ಕ್ಕೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದರಿಂದ ಸಾವಾಗಿದೆ ಎಂದು ದೂರಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಮಿಮ್ಸ್‌ನ ಆರ್‌ಎಂಒ ಡಾ. ದರ್ಶನ್, ಅಂಗಾಂಗ ವೈಫಲ್ಯದಿಂದ ಬಾಲಕಿ ಸಾವಾಗಿದೆ, ತನಿಖೆ ಮಾಡಿಸಿಕೊಳ್ಳಿ ಅಂತ ಹೇಳಿದ್ದಾರೆ. ಬೇರೆ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ಮಾಡುವಂತೆ ಸ್ಥಳದಲ್ಲೇ ಶವವಿಟ್ಟು ಪೋಷಕರ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ಉಂಟಾಗಿದ್ದು, ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂದಾನಕ್ಕೆ ಯತ್ನಿಸಿದ್ದಾರೆ.

ಇದನ್ನೂ ಓದಿ : ಹೇಮಾವತಿ ಲಿಂಕ್ ಕೆನಾಲ್‌ ಕಾಮಗಾರಿ ವಿರೋಧಿಸಿ ತೀವ್ರ ಹೋರಾಟ – 20ಕ್ಕೂ ಹೆಚ್ಚು ರೈತರ ವಿರುದ್ಧ FIR!

Btv Kannada
Author: Btv Kannada

Read More