ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಕಾಂಗ್ರೆಸ್ “ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶ” ನಡೆಯಲಿದೆ. ಈ ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ.
ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶ ಇಂದು ಸಂಜೆ 4.00 ಗಂಟೆಗೆ ನಿಕಟಪೂರ್ವ ಶಾಸಕರ ಕಛೇರಿ, ಎಂ.ಎಸ್. ರಾಮಯ್ಯ ಲೇಔಟ್, ನಾಗಸಂದ್ರ ಮೆಟ್ರೋ ಸ್ಟೇಷನ್ ಹತ್ತಿರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ಮಂಜುನಾಥ್ ವಹಿಸಿಕೊಂಡಿದ್ದು, ಮುಖ್ಯ ಅಥಿತಿಯಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಮಾಜಿ ಸಚಿವ ರೇವಣ್ಣ, ಸೌಮ್ಯ ರೆಡ್ಡಿ, ಬಿ.ಎಲ್ ಶಂಕರ್ ಭಾಗವಹಿಸಲಿದ್ದಾರೆ.
ಹಾಗೆಯೇ ಅಬ್ದುಲ್ ವಾಜೀದ್, ಅಬ್ಬಿಗೆರೆ ರಾಜಣ್ಣ, ಕೆ.ಸಿ ಅಶೋಕ್, ಕೆ.ಸಿ ವೆಂಕಟೇಶ್ ಕೂಡ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇನ್ನು ಮಾಜಿ ರಾಜ್ಯಸಭಾ ಸದಸ್ಯ ಎಂ.ವಿ ರಾಜೀವ್ ಗೌಡ, ವಿಧಾನ ಪರಿಷತ್ ಸದಸ್ಯರಾ ಪುಟ್ಟಣ್ಣ ಹಾಗೂ ರಾಮೋಜಿ ಗೌಡರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : ನೆಲಮಂಗಲ : ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ಹಣ ದೋಚಿ ಪರಾರಿಯಾದ ಖತರ್ನಾಕ್ ಕಳ್ಳರು!
