ನೆಲಮಂಗಲ : ಕಾರಿನ ಗ್ಲಾಸ್ ಒಡೆದು ಖತರ್ನಾಕ್ ಕಳ್ಳರು 11.5 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ ನಗರದ ಅಂಬೇಡ್ಕರ್ ಭವನದ ಮುಂದೆ ನಡೆದಿದೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗದು ಅತೀಕ್ ರೆಹಮಾನ್ ಎಂಬುವವರಿಗೆ ಸೇರಿದ್ದಾಗಿದ್ದು, ಅವರು ದಾಬಸ್ ಪೇಟೆಯಲ್ಲಿ ಲಾಜಿಸ್ಟಿಕ್ಸ್ ನಡೆಸುತ್ತಿದ್ದರು. ಈ ವೇಳೆ ತನ್ನ ಅಣ್ಣ ಬ್ಯಾಂಕ್ನಿಂದ ಹಣ ತರುವಂತೆ ಹೇಳಿದ್ದರು. ಹಾಗಾಗಿ ಅತೀಕ್ ರೆಹಮಾನ್ ದಾಬಸ್ ಪೇಟೆಯಿಂದ ಹಣ ತೆಗೆದುಕೊಂಡು ಬಂದಿದ್ದರು. ನಂತರ ಅತೀಕ್ ನೆಲಮಂಗಲದಲ್ಲಿ ಮಿಕ್ಸಿ ರಿಪೇರಿ ಮಾಡಿಸಲು ಹೊಗಿದ್ದರು.
ಅತೀಕ್ ಕಾರಿನಲ್ಲಿ ಹಣದ ಬ್ಯಾಗ್ ಇಟ್ಟು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಮಹಿಳೆಗೆ ವಂಚನೆ ಆರೋಪ – ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ FIR!

Author: Btv Kannada
Post Views: 217