ಇಂದಿನಿಂದ ವಿಧಾನಸೌಧ ಗೈಡೆಡ್ ಟೂರ್‌ ಆರಂಭ – ಟಿಕೆಟ್ ದರ ಎಷ್ಟು?

ಬೆಂಗಳೂರು : ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರವು ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿದ್ದು, ಇಂದಿನಿಂದ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಪ್ರಾರಂಭವಾಗುತ್ತಿದೆ.

ವಿಧಾನಸೌಧ ಗೈಡೆಡ್ ಟೂರ್‌ ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದ್ದು, ಪ್ರತಿ ತಿಂಗಳು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಜನರು ಶಕ್ತಿಸೌಧವನ್ನು ವೀಕ್ಷಿಸಬಹುದಾಗಿದೆ. ಮೊದಲ ವಿಧಾನಸೌಧದ ಪ್ರವಾಸಕ್ಕಾಗಿ ಶುಕ್ರವಾರದವರೆಗೆ 50ಕ್ಕೂ ಹೆಚ್ಚಿನ ಮಂದಿ ನೋಂದಣಿ ಮಾಡಿಕೊಂಡಿದ್ದರು.

ಪ್ರವಾಸೋದ್ಯಮ ಇಲಾಖೆ, ವಿಧಾನಸಭಾ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತು ವಿಧಾನಸೌಧ ಭದ್ರತಾ ವಿಭಾಗಗಳ ಸಹಯೋಗದಲ್ಲಿ ವಿಧಾನಸೌಧಮಾರ್ಗದರ್ಶಿ ಪ್ರವಾಸನಡೆಸಲಾಗುತ್ತಿದೆ. ಈ ವಿಧಾನಸೌಧ ಪ್ರವಾಸಕ್ಕಾಗಿ ಸಾರ್ವಜನಿಕರು ಕರ್ನಾಟಕ ರಾಜ್ಯ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ವಿಧಾನಸೌಧ ಪ್ರವಾಸದಲ್ಲಿ ವಿಧಾನ ಸೌಧದ ಇತಿಹಾಸ ತಿಳಿಯಬಹುದಾಗಿದೆ. ಅದರೊಂದಿಗೆ, ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣಗಳು, ಸಿಎಂ ಕೊಠಡಿ ಸೇರಿದಂತೆ ಇನ್ನಿತರೆ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಈ ಐತಿಹಾಸಿಕ ಕಟ್ಟಡದ ಮಾಹಿತಿ ಒದಗಿಸಲು ಗೈಡ್‌ಗಳು ಕೂಡ ಇರಲಿದ್ದಾರೆ.

ಟಿಕೆಟ್‌ ದರ ಎಷ್ಟು?

ವಿಧಾನಸೌಧ ವೀಕ್ಷಿಸಲು ಪ್ರತಿ ಪ್ರವಾಸಿಗರಿಗೆ ಆರಂಭಿಕವಾಗಿ 50 ರೂ. ಪ್ರವೇಶ ಶುಲ್ಕ (Entry Fees) ನಿಗದಿ ಮಾಡಲಾಗಿದೆ.‌ 1ರಿಂದ 16 ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಿಗೆ ತಲಾ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. 15 ಮತ್ತು ಅದಕ್ಕಿಂತ ಚಿಕ್ಕವರಿಗೆ ಪ್ರವೇಶ ಉಚಿತ ಇರಲಿದೆ.

ಇದನ್ನೂ ಓದಿ : ರಸ್ತೆಯಲ್ಲಿ ದಿಢೀರನೇ ವಾಹನ ತಡೆಯುವಂತಿಲ್ಲ – ಟ್ರಾಫಿಕ್ ಪೊಲೀಸರಿಗೆ ಡಿಜಿಪಿ ಎಂ.ಎ ಸಲೀಂ ಸೂಚನೆ!

Btv Kannada
Author: Btv Kannada

Read More