ಹೈದರಾಬಾದ್ : ವಿಶ್ವ ಸುಂದರಿ 2025 ಕಿರೀಟವನ್ನ ಮಿಸ್ ಥಾಯ್ಲೆಂಡ್ ಬ್ಯೂಟಿ ಓಪಲ್ ಸುಚಾಟಾ ಚುವಾಂಗ್ಸ್ರಿ ಅವರು ಮುಡಿಗೇರಿಸಿಕೊಂಡಿದ್ದಾರೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ Miss World 2025 ಗ್ರ್ಯಾಂಡ್ ಫಿನಾಲೆಯಲ್ಲಿ Miss Thailand ಖ್ಯಾತಿಯ ಓಪಲ್ ಸುಚಾಟಾ ಮಿಸ್ ವರ್ಲ್ಡ್ ಕಿರೀಟ ಅಲಂಕರಿಸಿದ್ದಾರೆ.
72 ನೇ ಆವೃತ್ತಿಯ ಮಿಸ್ ವರ್ಲ್ಡ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಜೆಕ್ ಗಣರಾಜ್ಯದ ಆಳ್ವಿಕೆಯ ರಾಣಿ ಕ್ರಿಸ್ಟಿನಾ ಪಿಸ್ಜ್ಕೋವಾ ತಮ್ಮ ಕಿರೀಟವನ್ನು ಹೊಸ ಪ್ರಶಸ್ತಿ ವಿಜೇತರಿಗೆ ಹಸ್ತಾಂತರಿಸಿದರು.
ಬಹುನಿರೀಕ್ಷಿತ ವಿಶ್ವ ಸುಂದರಿ 2025 ಗ್ರ್ಯಾಂಡ್ ಫಿನಾಲೆ ಶನಿವಾರ ಸಂಜೆ ಹೈದರಾಬಾದ್‌ನಲ್ಲಿರುವ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಥೈಲ್ಯಾಂಡ್‌ನ ಓಪಲ್ ಸುಚಾಟಾ ಚುವಾಂಗ್ಸ್ರಿ (Opal Suchata Chuangsri) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಜ್ಕೋ ಕಿರೀಟ ಧಾರಣೆ ಮಾಡಿದರು. ಪ್ರಶಸ್ತಿ ಸ್ವೀಕಾರ ವೇಳೆ ಓಪಲ್ ಸುಚಾಟಾ ಅವರು ಹೂಗಳಿಂದ ಅಲಂಕರಿಸಿದ್ದ ಬಿಳಿ ಗೌನ್‌ನಲ್ಲಿ ಕಂಗೊಳಿಸಿದರು.
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅಂತಿಮ ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದರು, ಇದರಲ್ಲಿ ಭಾರತದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಒಬ್ಬರಾಗಿದ್ದರು. ಏಪ್ರಿಲ್ 2023 ರಲ್ಲಿ, 19ನೇ ವಯಸ್ಸಿನಲ್ಲಿ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್’ ಕಿರೀಟವನ್ನು ನಂದಿನಿ ಗೆದ್ದುಕೊಂಡಿದ್ದರು. ಆದರೆ ಟಾಪ್ 8ರಲ್ಲಿ ನಂದಿನಿ ಗುಪ್ತಾ ಅವರು ಸ್ಥಾನ ಪಡೆಯುವಲ್ಲಿ ವಿಫಲವಾಗಿ ಭಾರತದ ವಿಶ್ವಸುಂದರಿ ಪಟ್ಟದ ಆಸೆ ನಿರಾಸೆಯಾಗುವಂತೆ ಮಾಡಿದ್ದಾರೆ.
ಇದನ್ನೂ ಓದಿ : ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಿದ್ದ ಸಚಿವ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರ!
