KMF ವತಿಯಿಂದ ‘ವಿಶ್ವ ಹಾಲು ದಿನಾಚರಣೆ’ ಸಂಭ್ರಮ – ನಾಳೆ ನೂತನ ಉತ್ಪನ್ನಗಳ ಬಿಡುಗಡೆ.. ನಂದಿನಿ ಪನೀರ್ ಖಾದ್ಯ ಸ್ಪರ್ಧೆ!

ಬೆಂಗಳೂರು : ಪ್ರತಿ ವರ್ಷ ಜೂನ್ 1ರಂದು ವಿಶ್ವ ಹಾಲು ದಿನವನ್ನು ಆಚರಣೆ ಮಾಡಲಾಗುತ್ತದೆ. ಆರೋಗ್ಯಕರ ಜೀವನ, ಆಹಾರ ಪದ್ಧತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹಾಲಿನ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಪ್ರತಿ ವರ್ಷ ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು ತಮ್ಮ ಮಾರುಕಟ್ಟೆ ವ್ಯಾಪ್ತಿಯಲ್ಲಿ ಜೂನ್ 1ರಂದು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಶಿಷ್ಟವಾಗಿ “ವಿಶ್ವ ಹಾಲು ದಿನಾಚರಣೆ” ಆಚರಿಸುತ್ತಾ ಬರುತ್ತಿದೆ. ನಂದಿನಿ ಹಾಲಿನ ಸೇವನೆಯಿಂದಾಗುವ ಅನುಕೂಲಗಳು ಮತ್ತು ಹಾಲಿನಲ್ಲಿರುವ ಪೌಷ್ಟಿಕಾಂಶಗಳ ಮಹತ್ವದ ಬಗ್ಗೆ ರಾಜ್ಯದ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ.

ಅದರಂತೆ ಈ ಬಾರಿಯೂ ವಿಶ್ವ ಹಾಲು ದಿನಾಚರಣೆ ಅಂಗವಾಗಿ “ನೂತನ ನಂದಿನಿ ಗುಡ್‌ ಲೈಫ್ ಮಫಿನ್ಸ್, ಸೈಸ್ ಕೇಕ್ಸ್, ಬಾರ್ ಕೇಕ್ಸ್ ಉತ್ಪನ್ನಗಳು ಬಿಡುಗಡೆ ಹಾಗೂ ನಂದಿನಿ ಪನೀರ್ ಖಾದ್ಯ ಸ್ಪರ್ಧೆ”ಯನ್ನು KMF ಹಮ್ಮಿಕೊಂಡಿದೆ.

ನಾಳೆ ಕರ್ನಾಟಕ ಹಾಲು ಮಹಾಮಂಡಳದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರಿಗೆ ‘ನಂದಿನಿ ಪನೀರ್ ಖಾದ್ಯ ಸ್ಪರ್ಧೆ ಮತ್ತು “ನೂತನ 18 ವಿವಿಧ ಸ್ವಾದದ ನಂದಿನಿ ಗುಡ್‌ ಲೈಫ್ ಮಫಿನ್ಸ್, ಸ್ಟೈಸ್ ಕೇಕ್ಸ್, ಬಾರ್ ಕೇಕ್ಸ್ ಉತ್ಪನ್ನಗಳನ್ನು ಮಾರುಕಟ್ಟೆ ಬಿಡುಗಡೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಕೆಎಮ್ಎಫ್ ಅಧ್ಯಕ್ಷರಾದ ಮಾನ್ಯ ಶ್ರೀ. ಭೀಮಾನಾಯ್ಕ ರವರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ ಕೆ.ಎ.ಎಸ್ ರವರು ಮಧ್ಯಾಹ್ನ 2.30 ಗಂಟೆಗೆ ಕೆಎಂಎಫ್ ಕೇಂದ್ರ ಕಚೇರಿ ಆವರಣದಲ್ಲಿ ನೂತನ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ಮತ್ತು ನಂದಿನಿ ಪನೀರ್ ಖಾದ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.

ಕಾರ್ಯಕ್ರಮದ ವಿವರಗಳು :

1) ನಂದಿನಿ ಪನೀರ್ ಖಾದ್ಯ ಸ್ಪರ್ಧೆ ಸಮಯ : ಬೆಳಗ್ಗೆ 11.30 ರಿಂದ 12.30 ಗಂಟೆವರೆಗೆ

2) ಭೋಜನ : ಮಧ್ಯಾಹ್ನ 1.30 ಗಂಟೆಗೆ

3) ನೂತನ ಉತ್ಪನ್ನಗಳ ಬಿಡುಗಡೆ ಮತ್ತು ಖಾದ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ : ಮಧ್ಯಾಹ್ನ 2:30 ರಿಂದ 3:30ರವರೆಗೆ

2001ನೇ ಇಸವಿಯಲ್ಲಿ ಮೊಟ್ಟಮೊದಲ ಬಾರಿಗೆ ಹಾಲು ದಿನಾಚರಣೆ : ಹಾಲು ಒಂದು ಪರಿಪೂರ್ಣ ಆಹಾರವಾಗಿದ್ದು, ಮನುಷ್ಯನ ಉತ್ತಮ ಆರೋಗ್ಯಕ್ಕೆ ಅತ್ಯವಶ್ಯವಾಗಿದೆ ಆದ್ದರಿಂದ ಹಾಲನ್ನು ಅಮೃತ ಎಂದು ಕರೆಯವುದು ವಾಡಿಕೆಯಲ್ಲಿದೆ ಅದ್ದರಿಂದ ಜನ ಸಾಮಾನ್ಯರಲ್ಲಿ ಹಾಲಿನ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೊಟ್ಟಮೊದಲಿಗೆ 2001ನೇ ಇಸವಿಯಲ್ಲಿ “Food and Agriculture Organization” (FAO) ಸಂಸ್ಥೆಯು ಜೂನ್ 01ನ್ನು “ವಿಶ್ವ ಹಾಲು ದಿನಾಚರಣೆ”ಯನ್ನಾಗಿ ಆಚರಿಸಲು ಘೋಷಿಸಲಾಯಿತು. ಅದರಂತೆ ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 01 ರಂದು”ವಿಶ್ವ ಹಾಲು ದಿನಾಚರಣೆ” ಆಚರಿಸಲಾಗುತ್ತಿದೆ.

ಇದನ್ನೂ ಓದಿ : ಬೀದರ್‌ನಲ್ಲಿ ಹಾಡಹಗಲೇ ಕಾರ್‌ನಲ್ಲಿದ್ದ 2 ಲಕ್ಷ ಹಣ ಎಗರಿಸಿದ ಖತರ್ನಾಕ್ ಖದೀಮರು!

 

 

 

 

 

Btv Kannada
Author: Btv Kannada

Read More