ಬೀದರ್‌ನಲ್ಲಿ ಹಾಡಹಗಲೇ ಕಾರ್‌ನಲ್ಲಿದ್ದ 2 ಲಕ್ಷ ಹಣ ಎಗರಿಸಿದ ಖತರ್ನಾಕ್ ಖದೀಮರು!

ಬೀದರ್ : ಖತರ್ನಾಕ್ ಖದೀಮರು ಕಾರಿನ ಗಾಜು ಒಡೆದು 2 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದ ಮಹಾತ್ಮಾ ಗಾಂಧಿ ಸರ್ಕಲ್‌ ಬಳಿ ನಡೆದಿದೆ.

ಭಾಲ್ಕಿ ಪಟ್ಟಣದ ನಿವಾಸಿ ಶಿವಕುಮಾರ್ ಲೋಕಂಡೆ ಎಂಬುವವರಿಗೆ ಸೇರಿದ ಹಣ ಕಳ್ಳತನವಾಗಿದ್ದು, ಮನೆಯ ಕೆಲಸ ಮಾಡಿದವರಿಗೆ ಪೇಮೆಂಟ್ ಮಾಡಲು ತಂದಿದ್ದ ಹಣವನ್ನೇ ಖತರ್ನಾಕ್ ಕಳ್ಳ ಕದ್ದೊಯ್ದಿದ್ದಾರೆ.

ಶಿವಕುಮಾರ್ ಅವರ ಕಾರು ಚಾಲಕ ಶ್ರೀಕಾಂತ್ HDFC ಬ್ಯಾಂಕ್‌ನಿಂದ 2 ಲಕ್ಷ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಆ ಬಳಿಕ ಡ್ರೈವರ್ ಶ್ರೀಕಾಂತ್ ಹಣವನ್ನು ಕಾರಿನಲ್ಲಿರಿಸಿ, ಶಿವಕುಮಾರ್ ಅವರನ್ನ ಭೇಟಿ ಮಾಡಲು ತೆರಳಿದ್ದರು. ಶಿವಕುಮಾರ್​ನ ಭೇಟಿ ಮಾಡಿ ಬರುವಷ್ಟರಲ್ಲಿ ಇಬ್ಬರು ಖದೀಮರು ಹಣವನ್ನು ದೋಚಿ ಬೈಕ್​ನಲ್ಲಿ ಪರಾರಿಯಾಗಿದ್ದಾರೆ.

ಖದೀಮರ ಚಲನವಲನಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ : ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ವಿರುದ್ಧ ಭುಗಿಲೆದ್ದ ಆಕ್ರೋಶ – ತುಮಕೂರಲ್ಲಿ 144 ಸೆಕ್ಷನ್ ಜಾರಿ!

Btv Kannada
Author: Btv Kannada

Read More