ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸುಂದರ ಸಂಸಾರಕ್ಕೆ ಒಂಭತ್ತು ವರ್ಷ ತುಂಬಿದೆ. ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಪತ್ನಿ ಪ್ರಗತಿ ಶೆಟ್ಟಿಗೆ ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿದ್ದಾರೆ.

ನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು. ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜೊತೆಗಿರು ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ.

ಪ್ರಗತಿ ಶೆಟ್ಟಿ ಕೂಡ ಪತಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಕನಸುಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಅವುಗಳನ್ನು ಒಟ್ಟಿಗೆ ರಚಿಸುವವರೆಗೆ ಪ್ರತಿ ವರ್ಷ, ನಮ್ಮ ಪ್ರಯಾಣವು ಇನ್ನಷ್ಟು ಮಾಂತ್ರಿಕವಾಗಿರುತ್ತದೆ. ನಿಮ್ಮ ಅಚಲ ಬೆಂಬಲಕ್ಕಾಗಿ, ನನ್ನ ಶಕ್ತಿಯಾಗಿದ್ದಕ್ಕಾಗಿ ಮತ್ತು ಈ ಸುಂದರ ಜೀವನಕ್ಕಾಗಿ ನಾವು ಸಿನಿಮಾದ ಅದರಾಚೆಗೆ ಒಟ್ಟಿಗೆ ನಿರ್ಮಿಸುತ್ತಿದ್ದೇವೆ. ನಿಮ್ಮೊಂದಿಗೆ ಈ ವಿಶೇಷ ಕನಸಿನ ಜೀವನಕ್ಕಾಗಿ ದೇವರಿಗೆ ಧನ್ಯವಾದಗಳು. ಲವ್ ಯು ಫಾರೆವರ್ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

ಸಮುದ್ರ ಕಿನಾರೆಯಲ್ಲಿ ಇಬ್ಬರು ಮಕ್ಕಳ ಜೊತೆ ರಿಷಬ್ ಶೆಟ್ಟಿ ಹಾಗೂ ಪ್ರಗತಿ ವಾರ್ಷಿಕೋತ್ಸವವನ್ನು ಇಬ್ಬರು ಆಚರಿಸಿಕೊಂಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಗತಿ, ರಿಷಬ್ ಅವರಿಗೆ ಕೇಕ್ ತಿನ್ನಿಸ್ತಿದ್ದು, ಇಬ್ಬರು ಪರಸ್ಪರ ಹ್ಯಾಪಿ ಆನಿವರ್ಸರಿ ಅಂತ ವಿಶ್ ಮಾಡಿಕೊಳ್ತಾರೆ. ರೋಮ್ಯಾಂಟಿಕ್ ಸ್ಟೆಪ್ ಹಾಕುವ ಜೋಡಿ, ಮಕ್ಕಳ ಜೊತೆ ಫೋಟೋಕ್ಕೆ ಫೋಸ್ ಕೊಟ್ಟಿದ್ದಾರೆ.
ಇದನ್ನೂ ಓದಿ :http://ಏಷ್ಯಾದ ಅತಿದೊಡ್ಡ ಏರ್ ಶೋಗೆ ಹಲವು ಸುರಕ್ಷತಾ ಕ್ರಮ – ಬೆಂಗಳೂರಿನ 21 ಕೆರೆಗಳಲ್ಲಿ ಮೀನುಗಾರಿಕೆಗೆ ನಿಷೇಧ!
