ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಪೊಲೀಸ್ ಅಧಿಕಾರಿ ದಯಾ ನಾಯಕ್‌ಗೆ ಸಹಾಯಕ ಪೊಲೀಸ್ ಆಯುಕ್ತ (ACP) ಹುದ್ದೆಗೆ ಬಡ್ತಿ ಸಿಕ್ಕಿದೆ. ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್ ಅವರು ಮುಂಬೈ ಕ್ರೈಂ ಬ್ರಾಂಚ್ ಸೀನಿಯರ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಯಾ ನಾಯಕ್ ಅವರಿಗೆ ACP ಹುದ್ದೆಗೆ ಬಡ್ತಿ ಸಿಕ್ಕಿದ್ದಕ್ಕೆ ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲ, ಇಡೀ ಮಹಾರಾಷ್ಟ್ರದಲ್ಲೂ ಸಂಭ್ರಮ ಮನೆ ಮಾಡಿದೆ. ದಯಾ ನಾಯಕ್ ಮೂಲತಃ ಕರ್ನಾಟಕದ ಕಾರ್ಕಳ ತಾಲೂಕಿನ ಎನ್ನೆಹೊಳ ಗ್ರಾಮದವರು. ಸಾಮಾನ್ಯ ಹಿನ್ನೆಲೆಯಿಂದ ಬಂದ ನಾಯಕ್, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಧೈರ್ಯದ ನಿರ್ಧಾರಗಳಿಂದ ಗುರುತಿಸಿಕೊಂಡಿದ್ದಾರೆ.
1995ರಲ್ಲಿ ಮುಂಬೈ ಪೊಲೀಸ್ ಇಲಾಖೆ ಸೇರಿದ ಅವರು, ಕಡಿಮೆ ಅವಧಿಯಲ್ಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಹೆಸರು ಮಾಡಿದರು. 1990 ಮತ್ತು 2000 ದಶಕದ ಆರಂಭದಲ್ಲಿ ಮುಂಬೈ ಅಂಡರ್‌ವರ್ಲ್ಡ್‌ನ ಹಿಡಿತದಲ್ಲಿತ್ತು. ಆಗ ದಯಾ ನಾಯಕ್ ಗೂಂಡಾ ಜಗತ್ತಿಗೆ ಸವಾಲೆಸೆದ ಅನೇಕ ಧೈರ್ಯಶಾಲಿ ಕಾರ್ಯಾಚರಣೆಗಳನ್ನು ನಡೆಸಿದರು. 2004ರ ವರೆಗೆ 85ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಮಾಡಿ, ಮುಂಬೈನ ಅನೇಕ ಕುಖ್ಯಾತ ಗೂಂಡಾಗಳನ್ನು ಶಾಶ್ವತವಾಗಿ ತಡೆದರು. ಇದರಿಂದ ಗೂಂಡಾಗಳಲ್ಲಿ ಭಯ, ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿತು.
ಇದನ್ನೂ ಓದಿ : ಡಿ. ಸತ್ಯಪ್ರಕಾಶ್ ನಿರ್ದೇಶನದ “X&Y” ಚಿತ್ರಕ್ಕೆ U/A ಸರ್ಟಿಫಿಕೇಟ್ – ಜೂನ್ನಲ್ಲಿ ಸಿನಿಮಾ ತೆರೆಗೆ!
