RCB ಫೈನಲ್​ ಎಂಟ್ರಿಗೆ ಇಂದೇ ಗೋಲ್ಡನ್ ಚಾನ್ಸ್.. ಬಲಿಷ್ಠ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

ಇಂಡಿಯನ್ ಪ್ರೀಮಿಯರ್ ಲೀಗ್​ 2025ರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಚಂಡೀಗಢ್​ನ ಮುಲ್ಲನ್​ಪುರ್​ನಲ್ಲಿ ಇಂದು ನಡೆಯಲಿರುವ ಪ್ಲೇಆಫ್ ಸುತ್ತಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಈ ಪಂದ್ಯಕ್ಕಾಗಿ ಆರ್​ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ಕಣಕ್ಕಿಳಿಸಲಿದೆ.

ಲಕ್ನೋ ತಂಡದ ವಿರುದ್ಧ ದೊಡ್ಡ ಜಯ ದಾಖಲಿಸಿದ ಆರ್​ಸಿಬಿಗೆ ಫೈನಲ್​ ಎಂಟ್ರಿ ಕೊಡಲು ಇನ್ನೊಂದೆ ಹೆಜ್ಜೆ ಬಾಕಿ ಇದೆ. ಇನ್ನು ಈ ಪಂದ್ಯವನ್ನು ಸೋತರೂ ಆರ್​ಸಿಬಿಗೆ ಕ್ವಾಲಿಫೈಯರ್​-2ರಲ್ಲಿ ಆಡುವ ಇನ್ನೊಂದು ಅವಕಾಶ ಇರುತ್ತದೆ. ಆದರೆ ಆರ್​ಸಿಬಿ ಇನ್ನೊಂದು, ಮತ್ತೊಂದು ಎಂದು ಅವಕಾಶ ನೋಡದೇ ಕ್ವಾಲಿಫೈಯರ್​-1ರ ಪಂದ್ಯದಲ್ಲೇ ಕಠಿಣ ಪ್ರದರ್ಶನ ನೀಡಿ, ಗೆದ್ದು ನೇರವಾಗಿ ಫೈನಲ್​ಗೆ ಎಂಟ್ರಿ ಕೊಡುವುದು ಉತ್ತಮ.

ಯಾಕಂದ್ರೆ ಗುಜರಾತ್ ಹಾಗೂ ಮುಂಬೈ ಇಂಡಿಯನ್ಸ್​ ಎಲಿಮಿನೇಟರ್ ಪಂದ್ಯ ಆಡಲಿವೆ. ಈ ಎಲಿಮಿನೇಟರ್ ಪಂದ್ಯದಲ್ಲಿ ವಿಜಯ ಸಾಧಿಸಿದ ತಂಡದ ಜೊತೆ ಆರ್​ಸಿಬಿ ಮತ್ತೆ ಕಾದಟ ಮಾಡಬೇಕಿರುತ್ತದೆ. ಇಲ್ಲಿ ಕೇವಲ 2 ದಿನಗಳ ವಿಶ್ರಾಂತಿ ಸಿಗುವುದರಿಂದ ಇದು ಆಟಗಾರರಿಗೆ ಕಠಿಣವಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11 ಸಂಭಾವ್ಯ ಆಟಗಾರರು : ಜಿತೇಶ್ ಶರ್ಮಾ (ನಾಯಕ, ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ರಜತ್ ಪಾಟಿದಾರ್, ಜೋಶ್ ಹ್ಯಾಜಲ್‌ವುಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ನುವಾನ್ ತುಷಾರ.

ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಬ್ಲೆಸಿಂಗ್ ಮುಜರಬಾನಿ, ಸುಯಾಶ್ ಶರ್ಮಾ, ರಸಿಖ್ ದಾರ್ ಸಲಾಂ, ಸ್ವಪ್ನಿಲ್ ಸಿಂಗ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಸ್ವಸ್ತಿಕ್ ಚಿಕಾರಾ

ಇದನ್ನೂ ಓದಿ : ರಾಜ್ಯದಲ್ಲಿ 15,441 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 5,277 ಉದ್ಯೋಗ ಸೃಷ್ಟಿ!

Btv Kannada
Author: Btv Kannada

Read More