ಸ್ಯಾಂಡಲ್‌ವುಡ್‌ನ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಈ ನಿರ್ಮಾಣ ಸಂಸ್ಥೆ ಈಗ ಭಾರತೀಯ ಚಿತ್ರರಂಗದ ಖ್ಯಾತ ನಟ ಹೃತಿಕ್ ರೋಷನ್ ಅವರೊಂದಿಗೆ ಹೊಸ ಚಿತ್ರವೊಂದನ್ನು ಘೋಷಿಸಿದೆ. ಈ ಮೂಲಕ ಕನ್ನಡ ನೆಲದಿಂದ ಜಾಗತಿಕ ರಂಗಕ್ಕೆ ತಮ್ಮ ಪಯಣವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಬಾಲಿವುಡ್‌ನ ಗ್ರೀಕ್ ಗಾಡ್ ಎಂದೇ ಫೇಮಸ್ ಆಗಿರುವ ನಟ ಹೃತಿಕ್ ರೋಷನ್ ಅವರೀಗ ಸ್ಯಾಂಡಲ್‌ವುಡ್‌ನ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಕೈಜೋಡಿಸಿದೆ. ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತಮ್ಮ ಮೊದಲ ಹಿಂದಿ ಚಿತ್ರವನ್ನು ಹೃತಿಕ್ ರೋಷನ್ ಅವರೊಂದಿಗೆ ಮಾಡಲು ಸಜ್ಜಾಗಿದೆ. ನಾವು ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತೇವೆ ಎಂದು ಹೊಂಬಾಳೆ ಸಂಸ್ಥೆ ಅನೌನ್ಸ್ ಮಾಡಿದೆ. ಸದ್ಯದಲ್ಲೇ ಈ ಚಿತ್ರದ ನಿರ್ದೇಶಕರ ಕುರಿತು ಹೆಚ್ಚಿನ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ತಿಳಿಸಲಿದೆ.
ರಾಜ್ಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲ್ಮ್ಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ ನೀಡುವಲ್ಲಿ ಬದ್ಧವಾಗಿದೆ. ಈಗ, ಹೃತಿಕ್ ರೋಷನ್ ಅವರಂತಹ ಪ್ರತಿಭಾವಂತ ನಟರೊಂದಿಗೆ ಕೈಜೋಡಿಸಿ, ದೇಶದ ಗಡಿಗಳನ್ನು ಮೀರಿ, ಪ್ರಪಂಚದಾದ್ಯಂತ ಕಥೆಗಳನ್ನು ತಲುಪಿಸುವ ಕನಸು ಕಂಡಿದೆ.
ಇದನ್ನೂ ಓದಿ : ಕಲರ್ಸ್ ಕನ್ನಡದಲ್ಲಿ ಬರ್ತಿದೆ ‘ನಂದಗೋಕುಲ’ – ಇದು ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆ!
