ಬೆಂಗಳೂರು : ಅಜ್ಜಿ ಮನೆಯಲ್ಲಿ ಕಳ್ಳತನ ಮಾಡಿದ್ದ ಮೊಮ್ಮಗನನ್ನು ನಂದಿನಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಿಥುನ್ ಬಂಧಿತ ಆರೋಪಿ. ಮಿಥುನ್ ತನ್ನ ಅಜ್ಜಿ ಪುಟ್ನಂಜಮ್ಮ ಬಳಿ ಆಟೋ ಕೊಡಿಸು ಅಂತಾ ಬೇಡಿಕೊಂಡಿದ್ದ. ಆದರೆ ಅಜ್ಜಿ ‘ಇಲ್ಲ, ಆಟೋ ಕೊಡಿಸೋದಿಲ್ಲ’ ಎಂದು ಹೇಳಿದ್ದರಂತೆ.
ದುಡ್ಡು ಇದ್ದರೂ ಆಟೋ ಕೊಡಿಸಲು ಪುಟ್ನಂಜಮ್ಮ ನಿರಾಕರಿಸಿದ ಹಿನ್ನೆಲೆಯಲ್ಲಿ ಮೊಮ್ಮಗ ಮಿಥುನ್ ಕೋಪಿಸಿಕೊಂಡಿದ್ದಾನೆ. ಅಲ್ಲದೇ ಅಜ್ಜಿಗೆ ಚೆಳ್ಳೆಹಣ್ಣು ತಿನ್ನಿಸಲು ಕಳ್ಳತನಕ್ಕೆ ಪ್ಲಾನ್ ಹಾಕಿದ್ದಾನೆ. ಅಂತೆಯೇ ವಿಜಯಾನಂದ ಲೇಔಟ್ನಲ್ಲಿರುವ ಅಜ್ಜಿ ಮನೆಯಲ್ಲಿ ಅಜ್ಜಿ ಇಲ್ಲದಿದ್ದಾಗ ನಕಲಿ ಕೀ ಮಾಡಿಸಿ ಹಣ ಕಳ್ಳತನ ಮಾಡಿದ್ದಾನೆ.
ಸುಮಾರು 81 ಚಿನ್ನಾಭರಣ ಹಾಗೂ 9 ಲಕ್ಷ 44 ಸಾವಿರ ನಗದು ಕಳ್ಳತನ ಮಾಡಿದ್ದ ಮಿಥುನ್, ಇನ್ನೇನು ಆಟೋ ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಜ್ಜಿ ಪುಟ್ನಂಜಮ್ಮ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಿಥುನ್ನನ್ನು ಹುಡುಕಿ ಬಂಧಿಸಿದ್ದಾರೆ.
ಇದನ್ನೂ ಓದಿ : ದುಬೈ, ಯೂರೋಪ್‌ಗೆ ತೆರಳಲು ಅನುಮತಿ ಕೊಡಿ – ಕೋರ್ಟ್ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್!
