ಬೆಂಗಳೂರು : ಬೆಂಗಳೂರಿನ ಪ್ರತಿಷ್ಟಿತ ಬೌರಿಂಗ್ ಕ್ಲಬ್ನಲ್ಲಿ ನಡೆದ 100 ಕೋಟಿ ಅಕ್ರಮ ಬಯಲಿಗೆ ಬರ್ತಿದ್ದಂತೆ ಬೌರಿಂಗ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಸುಂದರ್ ರಾಜ್ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಬೌರಿಂಗ್ ಕ್ಲಬ್ನ 100 ಕೋಟಿ ಅಖಂಡ ಭ್ರಷ್ಟಾಚಾರವನ್ನು ಬಿಟಿವಿ ಸಾಕ್ಷ್ಯ ಸಮೇತ ಬಿಚ್ಚಿಟ್ಟಿತ್ತು. ಬೌರಿಂಗ್ ಕ್ಲಬ್ ಮೆಗಾ ದಂಧೆಯನ್ನು ಬಿಟಿವಿ ಸಂಪೂರ್ಣವಾಗಿ expose ಮಾಡಿದ ಬೆನ್ನಲ್ಲೇ ಭಾಸ್ಕರ್ ಸುಂದರ್ ರಾಜ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಿಸೈನ್ ನೀಡಿದ್ದಾರೆ.

ಬೌರಿಂಗ್ ಕ್ಲಬ್ನ 100 ಕೋಟಿ ಅಕ್ರಮದ ಬಗ್ಗೆ ಮಾಜಿ ಕ್ಲಬ್ ಸದಸ್ಯರು ಸಹಕಾರಿ ಸಂಘದ ರಿಜಿಸ್ಟ್ರಾರ್ಗೆ ದೂರನ್ನ ನೀಡಿದ್ದರು. ಅಧ್ಯಕ್ಷ ಭಾಸ್ಕರ್ ಸುಂದರ್ ರಾಜ್ ಅವರು ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಜಮೀನು ಖರೀದಿ ಸಂಬಂಧ ಅಕ್ರಮ ಎಸಗಿದ್ದು, ಜಮೀನು ಖರೀದಿ ಮುನ್ನ ಆಡಳಿತ ಮಂಡಳಿ ಸದಸ್ಯರು ಸಭೆ ನಡೆಸದ ಅಕ್ರಮ ನಡೆಸಿದ್ದಾರೆ ಎಂದು ದೂರಿದ್ದರು.
ಭಾಸ್ಕರ್ ಸುಂದರ್ ರಾಜ್ ಅವರು ಕ್ಲಬ್ ಸದ್ಯಸರ ಸಭೆ ನಡೆಸದೆ ಜಮೀನು ಖರೀದಿಗೆ ನೂರು ಕೋಟಿ ಅವ್ಯವಹಾರ ನಡೆಸಿರುವ ಬಗ್ಗೆ ಬಿಟಿವಿಯೂ ಇಂಚಿಂಚೂ ಬಯಲು ಮಾಡಿದ್ದು, ಈ ಬಗ್ಗೆ ಸಾಕ್ಷ್ಯ ಸಮೇತ ನಿರಂತರವಾಗಿ ವರದಿ ಮಾಡಿತ್ತು. ಇದೀಗ ಅಕ್ರಮ ಬಯಲಾಗ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಸುಂದರ್ ರಾಜ್ ರಾಜೀನಾಮೆ ನೀಡಿದ್ದಾರೆ. ಉಪಾಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ರವಾನಿಸಿ ರಾತ್ರೋರಾತ್ರಿ ಓಡಿ ಹೋಗಿದ್ದಾರೆ.
ಬೌರಿಂಗ್ ಕ್ಲಬ್ ಕರ್ಮಕಾಂಡ : ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಬೌರಿಂಗ್ ಕ್ಲಬ್-2 ನಿರ್ಮಾಣಕ್ಕೆ 24 ಎಕ್ರೆ ಜಮೀನು ಖರೀದಿ ಮಾಡಲಾಗಿತ್ತು. ಇಲ್ಲಿ ಮಾರ್ಕೆಟ್ ವ್ಯಾಲ್ಯೂ ಇರೋದೇ ಎಕ್ರೆಗೆ ಗರಿಷ್ಟ 50 ಲಕ್ಷ. ಆದ್ರೆ, ಪ್ರತಿ ಎಕ್ರೆ ಜಮೀನಿಗೆ ಬೌರಿಂಗ್ ಕ್ಲಬ್ 4 ಕೋಟಿ ಕೊಡಲು ಮುಂದಾಗಿತ್ತು. 10 ಕೋಟಿ ಅಡ್ವಾನ್ಸ್ ಕೊಟ್ಟು ರಿಜಿಸ್ಟ್ರೇಷನ್ ಪ್ರಕ್ರಿಯೆ ಕೂಡ ಶುರು ಮಾಡಲಾಗಿತ್ತು. ಕ್ಲಬ್ನ ಬೈಲಾಗಳನ್ನು ಉಲ್ಲಂಘಿಸಿ ಜಮೀನು ಖರೀದಿಸಿದ್ದ ಬೌರಿಂಗ್ ಕ್ಲಬ್, ಪೂರ್ವಾನುಮತಿ ಇಲ್ಲದೆ 10 ಕೋಟಿ ಕೊಟ್ಟಿತ್ತು. ಕ್ಲಬ್ನ ಯಾವ ಸದಸ್ಯರಿಗೂ ಮಾಹಿತಿ ಕೊಡದೆ, ಸಭೆ ನಡೆಸದೆ ಜಮೀನು ಖರೀದಿ ಮಾಡಲಾಗಿತ್ತು.
ಆ ಬಳಿಕ 12 ಕೋಟಿ ಜಮೀನಿಗೆ 100 ಕೋಟಿ ಕೊಡ್ತಿರೋದೇಕೆ? ಕ್ಲಬ್ನ 100 ಕೋಟಿ ಲಾಸ್ನಲ್ಲಿ ಲಾಭ ಮಾಡಿಕೊಳ್ತಿರೋದು ಯಾರು? ಶತಕೋಟಿ ಡೀಲ್ ಹಿಂದೆ ಆಡಳಿತ ಮಂಡಳಿಯ ಕೈವಾಡ ಇದೆಯಾ? ಎಂಬೆಲ್ಲಾ ಅನುಮಾನಳು ಹುಟ್ಟಿಕೊಂಡಿತ್ತು. ಹೀಗಾಗಿ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರ ಮೇಲೆ ಅನುಮಾನಗಳು ಮೂಡಿದ್ದವು. ಈ ಎಲ್ಲಾ ಬೆಳಬವಣಿಗೆಯನ್ನು ಗಮನಿಸಿದ ಕ್ಲಬ್ ಸದಸ್ಯರು, ಸಹಕಾರಿ ಸಂಘಗಳ ರಿಜಿಸ್ಟ್ರಾರ್ಗೆ ದೂರು ಕೊಟ್ಟಿದ್ದರು.
ಕ್ಲಬ್ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸದೆ ಅಕ್ರಮವಾಗಿ ಜಮೀನು ಖರೀದಿ ಮಾಡಲಾಗಿದೆ. ಯಾವುದೇ ಪೂರ್ವಾನುಮತಿ ಪಡೆಯದೆ 10 ಕೋಟಿ ಅಡ್ವಾನ್ಸ್ ಕೂಡ ಪಾವತಿ ಮಾಡಲಾಗಿದೆ. ಆಡಳಿತ ಮಂಡಳಿ ಜೂನ್ 6ರಂದು ವಾರ್ಷಿಕ ಸಭೆ ಕರೆದಿದ್ದು, ಈ ಸಭೆಯಲ್ಲಿ ಕದ್ದು ಮುಚ್ಚಿ ಅನುಮೋದನೆ ಪಡೆಯಲು ಸಂಚು ರೂಪಿಸಿದ್ದರು. ಸಭೆಯ ಅಜೆಂಡಾ ಬಗ್ಗೆಯೂ ಮಂಡಳಿ ಯಾವುದೇ ಮಾಹಿತಿ ಕೊಡಲಿಲ್ಲ.
ಅಜೆಂಡಾದಲ್ಲಿ ಇಡದೆ ಇತರ ಕಾರ್ಯಸೂಚಿಯಲ್ಲಿ ಅನುಮೋದನೆಗೆ ಸಂಚು ಮಾಡಲಗಿದ್ದು, ಕಾಗೆ ಹಾರಿಸಿ 100 ಕೋಟಿ ಲಪಟಾಯಿಸ್ತಿದ್ದಾರೆ ಎಂದು ಸದಸ್ಯರ ಆರೋಪಿಸಿದ್ದರು. ನೋಟಿಸ್, ಆರ್ಥಿಕ ವರದಿ ಯಾವುದನ್ನೂ ಕೊಡದೆ ಯಾಮಾರಿಸ್ತಿದ್ದಾರೆ. 8 ವರ್ಷಗಳಲ್ಲಿ ಕ್ಲಬ್ನಿಂದ ಸುಮಾರು 400 ಕೋಟಿ ಮೊತ್ತದ ಕಾಮಗಾರಿ ಆಗಿದೆ. 400 ಕೋಟಿಯ ಯೋಜನೆಗಳನ್ನೂ ಅವ್ಯವಹಾರ ನಡೆದಿರೋ ಆರೋಪ ಕೇಳಿಬಂದಿದೆ.
5,500 ಶಾಶ್ವತ ಮೆಂಬರ್ಸ್ ಇರೋ ಕ್ಲಬ್ನಲ್ಲಿ ಆಡಳಿತ ಮಂಡಳಿಯದ್ದೇ ದರ್ಬಾರ್ ಆಗಿ ಹೋಗಿದ್ದು, ಈ ಬಗ್ಗೆ ಕ್ಲಬ್ ಮೆಂಬರ್ಸ್ ಸಚಿವ ಕೆ. ಎನ್ ರಾಜಣ್ಣಗೆ ಈ ಬಗ್ಗೆ ದೂರು ಕೊಟ್ರೂ ನೋ ಯೂಸ್ ಅನ್ನುವಂತಾಗಿದೆ. ಅಕ್ರಮಗಳ ಬಗ್ಗೆ ಪ್ರಶ್ನಿಸಿದರೆ ಕೆಲವರು ಬೆದರಿಕೆ ಒಡ್ಡಿ ಬಾಯಿ ಮುಚ್ಚಿಸ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಈ ಎಲ್ಲಾ ಬೆಳವಣಿಗೆ ಆಗುತ್ತಿದ್ದಂತೆ ಬೌರಿಂಗ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಸುಂದರ್ ರಾಜ್ ಅವರು ಇದೀಗ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ : ಕಾರಿನ ಸನ್ ರೂಫ್ನಿಂದ ಹೊರಬಂದು ರೊಮ್ಯಾನ್ಸ್ – ಹುಚ್ಚಾಟ ಮೆರೆದ ಜೋಡಿಗೆ ಬಿತ್ತು ಭಾರೀ ದಂಡ!
