ಬೆಂಗಳೂರು : ಬೆಂಗಳೂರಿನ ನಡುರಸ್ತೆಯಲ್ಲೇ ಕಾರಿನ ಸನ್ ರೂಫ್ನಿಂದ ಹೊರಬಂದು ರೊಮ್ಯಾನ್ಸ್ ಮಾಡಿ ಹುಚ್ಚಾಟ ಮೆರೆದ ದಂಪತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಾರಿನ ಸನ್ ರೂಫ್ನಿಂದ ಹೊರ ಬಂದು ರೊಮಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿದಂತೆ ಕಾರಿನಲ್ಲಿದ್ದ ದಂಪತಿಗಳಿಗೆ ಹಲಸೂರು ಟ್ರಾಫಿಕ್ ಪೊಲೀಸರು ಇದೀಗ ದಂಡ ವಿಧಿಸಿದ್ದಾರೆ.
ದಂಪತಿ ಕೋರಮಂಗಲದಿಂದ ಊಟ ಮುಗಿಸಿ KA03 NR2922 ನಂಬರ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾರಿನ ಸನ್ ರೂಫ್ನಿಂದ ಹೊರ ಬಂದು ರೊಮಾನ್ಸ್ ಮಾಡಿದ್ದರು. ಜೋಡಿಯ ವರ್ತನೆಯನ್ನು ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
ಇದೀಗ ಕಾರ್ನ ಸಂಖ್ಯೆ ಆಧರಿಸಿ ರೊಮ್ಯಾನ್ಸ್ ಜೊಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, 1500 ರೂ ದಂಡ ವಿಧಿಸಿದ್ದಾರೆ. ಅಪಾಯಕಾರಿ ರೀತಿ ಕಾರ್ ಚಾಲನೆಗೆ 1000 ದಂಡ ಹಾಗೂ ಸಂಚಾರ ನಿಯಮ ಉಲ್ಲಂಘನೆಗೆ 500ರೂ ದಂಡ ವಿಧಿಸಲಾಗಿದೆ. ಹಾಗಯೇ ಇನ್ಮುಂದೆ ಕಾರ್ನಲ್ಲಿ ರೊಮ್ಯಾನ್ಸ್ ಮಾಡದಂತೆ ದಂಪತಿಗಳಿಗೆ ಪೊಲೀಸರು ವಾರ್ನ್ ಮಾಡಿ ಕಳಿಸಿದ್ದಾರೆ.
ಇದನ್ನೂ ಓದಿ : ಸಿಡಿಆರ್ ಕೇಸ್ನಲ್ಲಿ ಐಶ್ವರ್ಯ ಗೌಡಗೆ ಮತ್ತೆ ಸಂಕಷ್ಟ – ಹೈಕೋರ್ಟ್ ತಡೆಯಾಜ್ಞೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪೋಲೀಸರು!
