ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅತ್ಯಾಚಾರ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದಾರೆ. ಈ ಮಧ್ಯೆ ಸ್ಯಾಂಡಲ್ವುಡ್ನ ಸ್ಟಾರ್ ಹೀರೋಗಳ ಬಗ್ಗೆ ನೀಡಿರುವ ಕೀಳುಮಟ್ಟದ ಹೇಳಿಕೆಯ ಆಡಿಯೋ ವೈರಲ್ ಆಗಿದ್ದು, ಇದು ಮತ್ತಷ್ಟು ವಿವಾದಗಳಿಗೆ ಕಾರಣವಾಗಿದೆ.
ಹಾಗಾಗಿ ಮಡೆನೂರು ಮನುನ ಬ್ಯಾನ್ ಮಾಡೋಕೆ ಹೆಚ್ಚಿದ ಒತ್ತಡ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿದೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಮಡೆನೂರ್ ಮನು ವಿರುದ್ಧ ಯಾವುದೇ ಬ್ಯಾನ್ ಇಲ್ಲ. ಸದ್ಯ ತೆರೆಕಂಡಿರುವ ಚಿತ್ರಕ್ಕೂ ಯಾವುದೇ ತೊಂದರೆ ಇಲ್ಲ. ಆದರೆ ನಾವು ಇನ್ಮುಂದೆ ಅಸಹಕಾರ ತೋರುತ್ತೇವೆ. ಚಿತ್ರರಂಗದ ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಟಿವಿ ಅಸೋಶಿಯೆಷನ್ ಸೇರಿದಂತೆ ಎಲ್ಲಾ ಸಂಘದವರ ಜೊತೆ ಚರ್ಚೆ ನಡೆಸಿ, ಇನ್ಮುಂದೆ ಮಡೆನೂರ್ ಮನು ಅವರಿಗೆ ಯಾವುದೇ ಸಿನಿಮಾ, ಶೋಗಳು ಹಾಗೂ ಸೀರಿಯಲ್ಗಳಲ್ಲಿ ಅವಕಾಶ ಕೊಡದಂತೆ ನಿರ್ಧರಿಸಲಾಗಿದೆ. ಇದರ ಜೊತೆಗೆ ಕಾನೂನಿನ ಪ್ರಕಾರ ಅವರ ವಿರುದ್ಧ ಪೊಲೀಸ್ ಕಮಿಷನರ್ಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ಮಡೆನೂರು ಮನು ಸಿನಿಮಾ ಹೀರೋ ಆಗಿ ಎಂಟ್ರಿ ಕೊಡುವ ಸಮಯದಲ್ಲಿಯೇ ಜೀವನದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣಗಳು ಮನು ವಿರುದ್ಧ ದಾಖಲಾಗಿರೋದು ಗೊತ್ತೇ ಇದೆ. ಇದೀಗ ಮಡೆನೂರು ಮನುಗೆ ನ್ಯಾಯಾಂಗ ಬಂಧನ ವಿಧಿಸಿದೆ ಕೋರ್ಟ್. 14ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ನೀಡಿದೆ ಕೋರ್ಟ್. ನ್ಯಾಯಧೀಶ ಸಿದ್ದರಾಮ ಅವರಿಂದ ಆದೇಶವಾಗಿದೆ.
ಇದನ್ನೂ ಓದಿ : ಮತ್ತೆ ಸೂಪರ್ ಹೀರೋ ಆಗಿ ತೇಜ್ ಸಜ್ಜಾ ಎಂಟ್ರಿ – ಮೇ.28ಕ್ಕೆ ʼಮಿರಾಯ್ʼ ಟೀಸರ್ ರಿಲೀಸ್!
