ಮತ್ತೆ ಸೂಪರ್ ಹೀರೋ ಆಗಿ ತೇಜ್ ಸಜ್ಜಾ ಎಂಟ್ರಿ – ಮೇ.28ಕ್ಕೆ ʼಮಿರಾಯ್ʼ ಟೀಸರ್‌ ರಿಲೀಸ್!

ಟಾಲಿವುಡ್‌ನ ಹನುಮ್ಯಾನ್ ಖ್ಯಾತಿಯ ನಟ ತೇಜ್ ಸಜ್ಜಾ ಅಭಿನಯದ ಮಿರಾಯ್ ಚಿತ್ರ ರೆಡಿ ಆಗಿದೆ. ಹನುಮ್ಯಾನ್ ಚಿತ್ರ ಆದ್ಮೇಲೆ ಮಾಡಿರೋ ಮತ್ತೊಂದು ಸೂಪರ್ ಹೀರೋ ಚಿತ್ರವೇ ಇದಾಗಿದೆ. ಬಹು ಭಾಷೆಯಲ್ಲಿಯೇ ಬರ್ತಿರೋ ಈ ಸಿನಿಮಾದ ಟೀಸರ್‌ ಎಂಟ್ರಿಗೆ ಡೇಟ್‌ ಫಿಕ್ಸ್‌ ಆಗಿದೆ. ಮೇ. 28ಕ್ಕೆ ಮಿರಾಯ್ ಫಸ್ಟ್‌ ಝಲಕ್‌ ಬಿಡುಗಡೆಯಾಗಲಿದೆ.

ಮಿರಾಯ್ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರ 2D ಮತ್ತು 3D ಫಾರ್ಮ್ಯಾಟ್ ಅಲ್ಲಿಯೇ ರಿಲೀಸ್ ಆಗುತ್ತಿದೆ. ಅತಿ ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಇದೇ ವರ್ಷ ಆಗಸ್ಟ್-1 ರಂದು ಮಿರಾಯ್ 8 ಭಾಷೆಯಲ್ಲಿಯೇ ತೆರೆಗೆ ಬರಲಿದೆ. ಈ ಮೂಲಕ ಸಿನಿಮಾದ ನಾಯಕ ತೇಜ್ ಸಜ್ಜಾ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಹೊಸ ಅನುಭವ ಕೊಡಲು ಬರ್ತಿದ್ದಾರೆ.

ಮಿರಾಯ್ ಸಿನಿಮಾದ ಮೂಲಕ ನಾಯಕ ನಟ ತೇಜ್ ಸಜ್ಜಾ ಮತ್ತೆ ಸೂಪರ್ ಹೀರೋ ಆಗಿಯೇ ಬರ್ತಿದ್ದಾರೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೂಪರ್ ಯೋಧಾ ಪಾತ್ರದಲ್ಲಿ ತೇಜ್ ಸಜ್ಜಾ ಅಭಿನಯಿಸುತ್ತಿದ್ದಾರೆ. ಕಾರ್ತಿಕ್ ಗಟ್ಟಮ್ನೇನಿ ಮಿರಾಯ್‌ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ : 18,600 ಕೋಟಿ ರೂ. ಸ್ಕ್ಯಾಮ್ ಎಲ್ಲಿ ಆಗಿದೆ ಎಂದು ಪ್ರೂವ್ ಮಾಡಿ – ಅಶ್ವಥ್ ನಾರಾಯಣ್​ಗೆ ಎಂ. ಲಕ್ಷ್ಮಣ್ ಚಾಲೆಂಜ್!

Btv Kannada
Author: Btv Kannada

Read More