ಬೆಂಗಳೂರು : ಮಂಡ್ಯದಲ್ಲಿ ನಿನ್ನೆ ಟ್ರಾಫಿಕ್ ಪೊಲೀಸರ ಹಣ ವಸೂಲಿ ದಂಧೆಗೆ ಮೂರು ವರ್ಷದ ಪುಟ್ಟ ಕಂದಮ್ಮ ಬಲಿಯಾಗಿತ್ತು. ಹೆಲ್ಮೆಟ್ ತಪಾಸಣೆ ವೇಳೆ ಬೈಕ್ ಅಡ್ಡಗಟ್ಟುವ ಭರದಲ್ಲಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಹೆಲ್ಮೆಟ್ ಹಾಕದೆ ನಿರ್ಲಕ್ಷ್ಯ ತೋರಿದ ಟ್ರಾಫಿಕ್ ಪೊಲೀಸರಿಗೆಯೇ ಫೈನ್ ಬಿದ್ದಿದೆ.
ಸಂಚಾರ ಪೊಲೀಸ್ ಹೆಲ್ಮೆಟ್ ಹಾಕದೆ ಬೈಕ್ ಹಿಂಬದಿಯಲ್ಲಿ ಕೂತಿದ್ದರು. ಈ ನಿಯಮ ಉಲ್ಲಂಘನೆ ಫೋಟೋ ತೆಗೆದು ಸಾರ್ವಜನಿಕರು ಎಕ್ಸ್ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದಕ್ಕೆ ಜನರಿಂದ ಟೀಕೆ ವ್ಯಕ್ತವಾಗ್ತಿದ್ದಂತೆ ಹೆಬ್ಬಾಳ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ – ಡಿಸಿಎಂ ಡಿಕೆಶಿ ಎಚ್ಚರಿಕೆ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಕೊಟ್ರು ಮಹತ್ವದ ಸುಳಿವು!

Author: Btv Kannada
Post Views: 213