ಬೆಂಗಳೂರು : ಬೆಂಗಳೂರಿನಲ್ಲಿ ಯುವಕ-ಯುವತಿಯರ ಹುಚ್ಚಾಟ ಮಿತಿ ಮೀರಿದೆ. ಬಾರು-ಪಬ್ಗಳಲ್ಲಿ ಕುಡಿಯೋದು ಗಲಾಟೆ ಮಾಡೋದು ಸಾಮಾನ್ಯವಾಗಿದೆ. ಆದ್ರೆ ಇಲ್ಲೊಂದು ಜೋಡಿ ನಡುರಸ್ತೆಯಲ್ಲೇ ಕಾರಿನ ಸನ್ ರೂಫ್ ತೆಗೆದು ರೊಮ್ಯಾನ್ಸ್ ಮಾಡಿದೆ.
ಟ್ರಿನಿಟಿ ರಸ್ತೆಯಲ್ಲಿ ಯುವಕ-ಯುವತಿಯ ಹುಚ್ಚಾಟ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ನಡುರಸ್ತೆಯಲ್ಲೇ ಕಿಸ್ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಡುರಸ್ತೆಯಲ್ಲೇ ಯುವಕ-ಯುವತಿ ಕಿಸ್ಸಿಂಗ್ ಮಾಡುತ್ತಾ ಅತಿರೇಕದ ವರ್ತನೆ ತೋರಿದ್ದು, ಈ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಎಕ್ಸ್ ನಲ್ಲಿ ವಿಡಿಯೋ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. KA03 NR2922 ನಂಬರ್ ಕಾರಿನಲ್ಲಿ ಹೋಗ್ತಿದ್ದವರ ಈ ಹುಚ್ಚಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ – ಡಿಸಿಎಂ ಡಿಕೆಶಿ ಎಚ್ಚರಿಕೆ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಕೊಟ್ರು ಮಹತ್ವದ ಸುಳಿವು!

Author: Btv Kannada
Post Views: 276