ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದ(ಎಂಡಿಎ) ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಪ್ರಭಾರ ಆಯುಕ್ತರನ್ನಾಗಿ ಕೆ.ಆರ್. ರಕ್ಷಿತ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎಂಡಿಎ ಆಯುಕ್ತ ಹಾಗೂ ಭೂಸ್ವಾಧೀನಾಧಿಕಾರಿಯಾಗಿ ಕೆ.ಆರ್.ರಕ್ಷಿತ್ ಅವರಿಗೆ ಹೆಚ್ಚಿನ ಅಧಿಕಾರ ವಹಿಸಲಾಗಿದ್ದು, ಎರಡೂ ಹುದ್ದೆಯನ್ನ ಮುಂದಿನ ಆದೇಶದ ವರೆಗೆ ನಿರ್ವಹಿಸುವಂತೆ ಸೂಚಿಸಲಾಗಿದೆ.
ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡರ ಮೊಮ್ಮಗನಾಗಿರುವ ರಕ್ಷಿತ್ ಅವರು, ಪ್ರಸ್ತುತ ಮೈಸೂರು ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2014ರ ಕೆಎಎಸ್ ಬ್ಯಾಚ್‌ನ ಅಧಿಕಾರಿಯಾದ ರಕ್ಷಿತ್, ಇದಕ್ಕೂ ಮುನ್ನ ಸಕಲೇಶಪುರ, ಹರಿಹರ ಹಾಗೂ ಮೈಸೂರು ತಹಶೀಲ್ದಾರ್ ಆಗಿ ಹಾಗೂ ಬಿಬಿಎಂಪಿ ಸಹಾಯಕ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಅಕ್ರಮದ ಕೂಪವಾಗಿದ್ದ ಎಂಡಿಎಗೆ ಇದೀಗ ದಕ್ಷ ಅಧಿಕಾರಿಯ ನೇಮಕವಾಗಿದ್ದು, ಹಳಿ ತಪ್ಪಿದ ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನು ಟ್ರ್ಯಾಕ್ಗೆ ತರಲು ಸರ್ಕಾರದ ಸರ್ವ ಪ್ರಯತ್ನ ಮಾಡಿದೆ. 50-50 ಹಗರಣದಿಂದ ಮಂಕು ಕವಿದಂತಾಗಿರುವ ಪ್ರಾಧಿಕಾರದಲ್ಲಿ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ಕಳೆಗುಂದಿತ್ತು. ಇದೀಗ ಮತ್ತೆ ಹೊಸ ರೂಪಕ್ಕೆ ತರಲು ಪ್ರಾಮಾಣಿಕ ಅಧಿಕಾರಿ ಕೆ.ಆರ್.ರಕ್ಷಿತ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಬಸ್, ಮೆಟ್ರೋ ಬೆನ್ನಲ್ಲೇ ರಾಜಧಾನಿ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ನಾಳೆಯಿಂದಲೇ ಆಟೋ ಪ್ರಯಾಣ ದರ ಏರಿಕೆ ಸಾಧ್ಯತೆ!
